Header Ads
Header Ads
Breaking News

“ಗುಂಡಡಪ್ಪು” ಸೇತುವೆ ಕಾಮಗಾರಿ ಸಂಸದ ನಳಿನ್‌ಕುಮಾರ್-ಶಾಸಕ ಉಮಾನಾಥ ಕೋಟ್ಯಾನ್ ಪರಿವೀಕ್ಷಣೆ

ಮೂಡಬಿದಿರೆ, : ಕೇಂದ್ರ ರಸ್ತೆ ನಿಧಿಯಿಂದ ಮಂಜೂರಾದ ರೂ. ೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ, ಮೂಡುಬಿದಿರೆ ತಾಲೂಕಿನ ಪೂರ್ವ ಗಡಿ ಪ್ರದೇಶವಾದ ಶಿರ್ತಾಡಿಯ ಕಜೆ ಮತ್ತು ಬೆಳ್ತಂಗಡಿ ತಾಲೂಕಿನ ಪಶ್ಚಿಮ ಗಡಿ ಭಾಗದ ಹೊಸಂಗಡಿಯನ್ನು ಅತಿ ಸಮೀಪದಲ್ಲಿ ಸಂಪರ್ಕ ಕಲ್ಪಿಸುವ “ಗುಂಡಡಪ್ಪು” ಸೇತುವೆ ಕಾಮಗಾರಿ ತಾಣವನ್ನು ಸಂಸದ ನಳಿನ್ ಕುಮಾರ್ ಕಟೀಲ್ ವೀಕ್ಷಿಸಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಳಿನ್ ಅವರು ಶಿರ್ತಾಡಿಯ ಕಜೆ ಹಾಗೂ ಹೊಸಂಗಡಿಯನ್ನು ಸಂಪರ್ಕ ಕಲ್ಪಿಸುವ ಗುಂಡಡಪ್ಪು ಸೇತುವೆಯ ನಿರ್ಮಾಣ ಈ ಭಾಗದ ಜನರ ಹಲವು ವರ್ಷದ ಬೇಡಿಕೆಯಾಗಿದೆ.

ಇದೀಗ ಕೇಂದ್ರ ರಸ್ತೆ ನಿಧಿಯಿಂದ ಮಂಜೂರಾದ ರೂ.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ‘ಮುಗ್ರೋಡಿ ಕನ್‌ಸ್ಟ್ರಕ್ಷನ್’ಗೆ ಟೆಂಡರ್ ಆಗಿದ್ದು ಮಳೆಗಾಲದ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದ್ದು ವರುಷದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಈ ಭಾಗದ ಜನತೆಯ ದಶಕಗಳ ನಿರೀಕ್ಷೆಯನ್ನು ಸಾಕಾರಗೊಳಿಸಲು ಸಂಸದರು ಕೇಂದ್ರದ ಮೂಲಕ ಅನುದಾನ ಒದಗಿಸಿ ಮಹದುಪಕಾರ ಮಾಡಿದ್ದಾರೆ. ಈ ಭಾಗದ ಗ್ರಾಮಗಳ ಜನತೆಯ ಸಂಪರ್ಕ ಸಮಸ್ಯೆಗೆ ಪರಿಹಾರ ತನ್ಮೂಲಕ ಈ ಭಾಗದ ಅಭಿವೃದ್ಧಿ ಈ ಸೇತುವೆ ನಿರ್ಮಾಣದಿಂದ ಸಾಧ್ಯವಾಗಲಿದೆ’ ಎಂದು ನುಡಿದು ಸಂಸದರಿಗೆ ಕೃತಜ್ಞತೆ ಸಲ್ಲಿಸಿದರು.ಜಿ.ಪಂ. ಸದಸ್ಯೆ ಸುಜಾತ ಕೆ.ಪಿ., ತಾ.ಪಂ. ಸದಸ್ಯೆ ನಾಗವೇಣಿ, ಶಿರ್ತಾಡಿ ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ , ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ಶ್ರೀನಾಥ್ ಸುವರ್ಣ, ನೆಲ್ಲಿಕಾರು ಗ್ರಾ.ಪಂ. ಅಧ್ಯಕ್ಷ ಜಯಂತ ಹೆಗ್ಡೆ ಮೊದಲಾದವರಿದ್ದರು.

Related posts

Leave a Reply