Header Ads
Header Ads
Breaking News

ಗುಜರಾತಿ ಅಂಗ್ಲ ಮಾಧ್ಯಮ ಶಾಲೆಯ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

ಮಂಗಳೂರಿನ ಗುಜರಾತಿ ಅಂಗ್ಲ ಮಾಧ್ಯಮ ಶಾಲೆಯ ೨೦೧೮-೧೯ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಜರುಗಿತ್ತು. ಶಾಲಾ ನಾಯಕ ಸೇರಿದಂತೆ ವಿವಿಧ ಶಾಲಾ ಸದಸ್ಯರು ಪ್ರಮಾಣ ವಚನ ಸ್ವೀಕಾರಿಸುವ ಮೂಲಕ ಶಾಲೆಯ ವಿದ್ಯಾರ್ಥಿ ಸಂಘ ವಿದ್ಯುತ್ತಕವಾಗಿ ಚಾಲನೆ ದೊರಕಿತ್ತು.ಮಂಗಳೂರಿನ ಗುಜರಾತಿ ಅಂಗ್ಲ ಮಾಧ್ಯಮ ಶಾಲೆಯ ೨೦೧೮-೧೯ನೇ ಸಾಲಿನ ವಿದ್ಯಾರ್ಥಿ ಸಂಘದ ಶನಿವಾರದಂದು ಅಧಿಕೃತವಾಗಿ ಚಾಲನೆ ದೊರಕಿತ್ತು. ಶಾಲಾ ನಾಯಕ, ಉಪನಾಯಕ, ಸಾಂಸ್ಕೃತಿಕ ನಾಯಕ, ಶಿಸ್ತುಪಾಲನೆ ನಾಯಕ, ಸ್ವಚ್ಚತಾ ನಾಯಕ ಸೇರಿದಂತೆ ಇನ್ನಿತರು ವಿದ್ಯಾಥಿಗಳಿಗೆ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಶೆಣೈ ಅವರು ಪ್ರಮಾಣ ವಚನ ಭೋದಿಸಿದರು.

    ಶಾಲಾ ವಿದ್ಯಾರ್ಥಿ ನಾಯಕ ಸಾಹಿಲ್ ಅಬ್ದುಲ್ ಖಾದರ್, ಉಪನಾಯಕ ರಾಯೀಷ್ ಮತ್ತು ಬಿಂದು ಹಾಗೂ ಸಂಪತ್ತಿನ ಇತರ ಮಂತ್ರಿಗಳು ಪ್ರಮಾಣ ವಚನ ಸ್ವೀಕಾರಿಸಿದರು. ಇನ್ನು ಮುಖ್ಯ ಅತಿಥಿಯಾಗಿದ್ದ ಸ್ಥಳೀಯ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣ ಹೇಗೆ ಬೆಳೆಯಬೇಕು. ದೇಶ ಪ್ರೇಮದ ಬಗ್ಗೆ ಸಲಹೆಯನ್ನಿತ್ತರುಬಳಿಕ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಶೆಣೈ ಮಾತನಾಡಿ, ವಿದ್ಯಾರ್ಥಿ ನಾಯಕರಿಗೆ ತಮ್ಮ ಕರ್ತವ್ಯದ ಬಗ್ಗೆ ತಿಳಿ ಹೇಳಿದರುಸಮಾರಂಭದಲ್ಲಿ ದೈಹಿಕ ಶಿಕ್ಷಕ ಮಹಮ್ಮದ್ ರಜಾಕ್, ಶಾಲಾಶೈಕ್ಷಣಿಕ ಸಮಿತಿಯ ಸದಸ್ಯರಾದ ಅವನಿ, ಶರ್ಮಿಳಾ, ಅಧ್ಯಾಪಕಿ ಶಾಲಿನಿ ಮತಿತರರು ಉಪಸ್ಥಿತಿರಿದ್ದರು.

Related posts

Leave a Reply