Breaking News

ಗುಜರಾತ್ ಕೋಮು ಗಲಭೆಯಲ್ಲಿ ನಡೆದ ಬಿಲ್ಕಿಸ್ ಬಾನು ಅತ್ಯಾಚಾರ, ೧೨ ಜನರಿಗೆ ನೀಡಲಾಗಿರುವ ಶಿಕ್ಷೆಯನ್ನು ಎತ್ತಿ ಹಿಡಿದ ಬಾಂಬೆ ಹೈಕೋರ್ಟ್

ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 12 ಜನರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ಎತ್ತಿಹಿಡಿದಿದೆ.
ಇದಲ್ಲದೆ ಶಿಕ್ಷೆಗೆ ಒಳಗಾದವರ ಪೈಕಿ ಮೂವರಿಗೆ ಮರಣದಂಡನೆ ವಿಧಿಸಬೇಕು ಎಂಬ ಸಿಬಿ‌ಐ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಗರ್ಭಿಣಿಯಾಗಿದ್ದ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವ ಮೂಲಕ ಮಹಿಳೆಯ ಹಕ್ಕು ಮತ್ತು ತಾಯ್ತನದ ಹಕ್ಕನ್ನು ಅತಿ ಕ್ರೂರವಾಗಿ ಉಲ್ಲಂಘಿಸಲಾಗಿದೆ ಎಂದು ಬಿಲ್ಕಿಸ್ ಬಾನು ಹೇಳಿದ್ದರು. ಹೈಕೋರ್ಟ್ತೀರ್ಪಿನಿಂದ ನ್ಯಾಯಾಂಗದ ಮೇಲೆ ಇಟ್ಟ ಭರವಸೆ ಈಡೇರಿದೆ ಎಂದು ಈಗ ಅವರು ಹೇಳಿದ್ದಾರೆ.
ಗುಜರಾತ್ ಕೋಮು ಗಲಭೆಯಲ್ಲಿ ಬಿಲ್ಕಿಸ್ ಬಾನು ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಶಿಕ್ಷೆಗೆ ಒಳಗಾದ 12 ಜನರ ಪೈಕಿ ಒಬ್ಬ ಸತ್ತಿದ್ದಾನೆ. ಉಳಿದ 11 ಜನರು ತಮಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠವು ತಳ್ಳಿ ಹಾಕಿ, ಶಿಕ್ಷೆಯನ್ನು ಕಾಯಂಗೊಳಿಸಿದೆ. ಏಳು ಜನರನ್ನು ಖುಲಾಸೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ. ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಮತ್ತು ಸಾಕ್ಷಿಗಳನ್ನು ನಾಶಪಡಿಸಿದ ಐವರು ಪೊಲೀಸರು ಮತ್ತು ಇಬ್ಬರು ವೈದ್ಯರು ಕೂಡ ತಪ್ಪಿತಸ್ಥರು ಎಂದು ನ್ಯಾಯಪೀಠ ಹೇಳಿದೆ. ಈ 7 ಜನರು ಜೈಲಿನಲ್ಲಿ ಇದ್ದ ಅವಧಿಯನ್ನು ಶಿಕ್ಷೆ ಎಂದು ಪರಿಗಣಿಸಿ ತಲಾ 20 ಸಾವಿರ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

Related posts

Leave a Reply