Header Ads
Header Ads
Breaking News

ಗುಜರಾತ್ ಚುನಾವಣೆಯ ಹೈಡ್ರಾಮಾಕ್ಕೆ ಅಂತ್ಯ: ಅಹ್ಮದ್ ಪಟೇಲ್ ಗೆಲವು

 

ಗಾಂಧಿನಗರ: ನಿನ್ನೆ ಬೆಳಗಿನಿಂದ ಆರಂಭವಾದ ಗುಜರಾತ್ ಚುನಾವಣೆಯ ಹೈಡ್ರಾಮಾ ಇಂದು ಮುಂಜಾನೆಯವರೆಗೂ ಮುಂದುವರೆದು ಮುಂಜಾನೆಯ ಎರಡು ಗಂಟೆಯ ಹೊತ್ತಿಗೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯವರು ಸೋಲಿಸಲು ಹವಣಿಸಿದ್ದ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಕೊನೆಗೂ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಕಾಂಗ್ರೆಸ್ ಗೆದ್ದಿದ್ದು ಒಂದು ಸ್ಥಾನವಾದರೂ ಇದು ನರೇಂದ್ರ ಮೋದಿ ಹಾಗೂ ಅಮಿತ್ ಶಾರಿಗೆ ಆದ ಭಾರೀ ಮುಖಭಂಗ ಎಂದೇ ಪರಿಗಣಿಸಲಾಗುತ್ತಿದೆ.
ಗುಜರಾತ್ ಮೂಲಕ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಶಾಸಕರ ಮತಗಳನ್ನು ಕಿತ್ತುಕೊಳ್ಳಲು ಸಾಕಷ್ಟು ರಣತಂತ್ರಗಳನ್ನು ರೂಪಿಸಿದ್ದರು. ಆದರೆ ಅದು ಯಾವುದು ಫಲ ಪಡೆಯಲೇ ಇಲ್ಲ. ಒಂದು ಲೆಕ್ಕದಲ್ಲಿ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ನಡೆಸಿದ ರಣತಂತ್ರ ಯಶಸ್ವಿಯಾಗಿದೆ ಎಂದು ಹೇಳಬಹುದು.
ಅಹ್ಮದ್ ಪಟೇಲ್ ಗೆಲವು ಕರ್ನಾಟಕ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಿದೆ. ಗುಜರಾತ್ ಕಾಂಗ್ರೆಸ್ ಶಾಸಕರನ್ನು ಒಂಬತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ಹಿಡಿದಿಟ್ಟುಕೊಂಡಿದ್ದ ಡಿ.ಕೆ. ಶಿವಕುಮಾರ್ ಈಗ ಹೈಕಮಾಂಡ್ ದೃಷ್ಟಿಯಲ್ಲಿ ಪ್ರೀತಿಗೆ ಪಾತ್ರರಾಗಿದ್ದಾರೆ. ಮತ್ತೊಮ್ಮೆ ಡಿಕೆಶಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಡಿಕೆಶಿಯನ್ನು ಮಣಿಸಲು ನಡೆಸಿದ ಂತ್ರದಲ್ಲೂ ಬಿಜೆಪಿ ವಿಫಲವಾಗಿದೆ ಎಂದು ಹೇಳಬಹುದು.
ಕಾಂಗ್ರೆಸ್‌ನ ಇಬ್ಬರು ಶಾಸಕರು ಬಹಿರಂಗವಾಗಿ ಬಿಜೆಪಿಗೆ ಮತ ಹಾಕಿದ್ದರೂ ಇದರಿಂದ ಆದ ಮತನಷ್ಟವನ್ನು ಬಿಜೆಪಿ ಸದಸ್ಯರ ಮೂಲಕವೇ ಪಡೆಯುವಲ್ಲಿ ಅಹ್ಮದ್ ಪಟೇಲ್ ಯಶಸ್ಸಿಯಾಗಿದ್ದರು. ಅಡ್ಡಮತದಾನದ ವಿಷಯ ಸಾಕಷ್ಟು ಸಮಸ್ಯೆ ತಂದೊಟ್ಟಿತ್ತು. ಇದರ ಗೊಂದಲ ಇಂದು ಮುಂಜಾನೆ ಎರಡು ಗಂಟೆಯವರೆಗೂ ಮುಂದುವರೆದಿತ್ತು. ಚುನಾವಣಾಧಿಕಾರಿಗಳು ಇಂದು ಮುಂಜಾನೆ ಚುನಾವಣೆಯ ಫಲಿತಾಂಶ ಘೋಷಿಸಿದ್ದು ಬಿಜೆಪಿಯ ಅಮಿತ್ ಶಾ, ಸ್ಮೃತಿ ಇರಾಣಿ ಮತ್ತು ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದಾರೆ.
ನಿನ್ನೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಎರಡೂ ಪಕ್ಷದವರು ಮೂರು ಸಾರಿ ಮನವಿ ಸಲ್ಲಿಸಿದ್ದರು ಇದರಿಂದ ಮತ ಎಣಿಕೆ ಪ್ರಕ್ರಿಯೆ ತಡವಾಗಿತ್ತು. ಫಲಿತಾಂಶವೂ ತಡವಾಗಿಯೇ ಹೊರ ಬಿದ್ದಿತ್ತು.

Related posts

Leave a Reply