Header Ads
Breaking News

ಗುಡ್ಡೆಕೊಪ್ಲ ಬಬ್ಬರ್ಯ ದೈವಸ್ಥಾನ : ಬಬ್ಬರ್ಯ ಮತ್ತು ಬಬ್ಬರ್ಯ ಬಂಟ ಧರ್ಮದೈವಗಳ ಪುನರ್ ಪ್ರತಿಷ್ಠೆ

ಸುರತ್ಕಲ್‍ನ ಗುಡ್ಡೆಕೊಪ್ಲ ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಬಬ್ಬರ್ಯ ಮತ್ತು ಬಬ್ಬರ್ಯ ಬಂಟ ಧರ್ಮದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಧರ್ಮದೈವಗಳ ನೇಮೋತ್ಸವವು ನಡೆಯಲಿದ್ದು ಆ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಧಾರ್ಮಿಕ ಕಾರ್ಯಕ್ರಮವು ತಡಂಬೈಲ್ ಶ್ರೀ ರಾಮ ಮಯ್ಯರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಫ್ರೆಬ್ರವರಿ 10ರಂದು ಬೆಳಗ್ಗೆ ಉಗ್ರಣ ಮುಹೂರ್ತ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀ ಕ್ಷೇತ್ರಕ್ಕೆ ಸಾಗಿತು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ಅಶೀರ್ವಚನ ನೀಡಿದರು.

ಈ ಸಂದರ್ಭ ಧಾರ್ಮಿಕ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷರಾದ ಯಶ್‍ಪಾಲ್ ಎ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕಾರ್ಯಕ್ರಮದಲ್ಲಿ ಇಡ್ಯಾ ಸುರತ್ಕಲ್‍ನ ಕಾರ್ಪೋರೇಟರ್ ಕುಮಾರಿ ನಯನಾ ಕೋಟ್ಯಾನ್, ಕಾಂಚನ ಹುಂಡೈ ಮಂಗಳೂರಿನ ಆಡಳಿತ ನಿರ್ದೇಶಕರಾದ ಪ್ರಸಾದ್ ರಾಜ್ ಕಾಂಚನ್, ದ.ಕ. ಜಿಲ್ಲಾ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಮೋಹನ್ ಬೆಂಗ್ರೆ, ಪಣಂಬೂರು-ಕುಳಾಯಿ ಶ್ರೀ ಮಹಾವಿಷ್ಣು ಭಜನಾ ಮಂದಿರ ಅಧ್ಯಕ್ಷರಾದ ಸತೀಶ್ ಸುವರ್ಣ, ಸುರತ್ಕಲ್ ಇಡ್ಯಾ ಜುಮ್ಮಾ ಮಸೀದಿಯ ಗೌರವಾಧ್ಯಕ್ಷರಾದ ಯಾಕೂಬ್ ಇಡ್ಯಾ, ಗುಡ್ಡೆಕೊಪ್ಲ ಬಬ್ಬರ್ಯ ದೈವಸ್ಥಾನದ ಗೌರವಾಧ್ಯಕ್ಷರಾದ ಪುಂಡಲೀಕ ಹೊಸಬೆಟ್ಟು, ಗುಡ್ಡೆಕೊಪ್ಲ ಮೊಗವೀರ ಸಂಘದ ಅಧ್ಯಕ್ಷರಾದ ಕೇಶವ ಕುಂದರ್, ಮುಂಬಯಿ ಗುಡ್ಡೆಕೊಪ್ಲ ಮೊಗವೀರ ಸಂಘದ ಅಧ್ಯಕ್ಷರಾದ ನರೇಂದ್ರ ಕರ್ಕೇರಾ, ಗುಡ್ಡೆಕೊಪ್ಲ ಬಬ್ಬರ್ಯ ದೈವಸ್ಥಾನದ ಅಧ್ಯಕ್ಷರಾದ ಉದಯ ಎಸ್. ಆಮೀನ್, ಬಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂಬೈ ಇದರ ಅಧ್ಯಕ್ಷರಾದ ಹರೀಶ್ ಶ್ರೀಯಾನ್, ಗುಡ್ಡೆಕೊಪ್ಲ ಮೊಗವೀರ ಮಹಿಳಾ ಸಮಾಜದ ಅಧ್ಯಕ್ಷರಾದ ಪ್ರಭಿತಾ ಪಿ. ಸಾಲ್ಯಾನ್ ಹಾಗೂ ಗುರಿಕಾರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *