Header Ads
Breaking News

ಗುಡ್ಡೆಕೊಪ್ಲ ಬಬ್ಬರ್ಯ ಪುನಃ ಪ್ರತಿಷ್ಠಾಪನೆ : ಫೆ.6ರಿಂದ 14ರ ವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ

ಸುರತ್ಕಲ್‍ನ ಗುಡ್ಡೆಕೊಪ್ಲ ಶ್ರೀ ಬಬ್ಬರ್ಯ ಮತ್ತು ಬಬ್ಬರ್ಯ ಬಂಟ ದೈವಗಳ ಪುನಃ ಪ್ರತಿಷ್ಠಾಪನೆ, ಕಲಶಾಭಿಷೇಕ ಮತ್ತು ಧರ್ಮದೈವಗಳ ನೇಮೋತ್ಸವ ಫೆ.6ರಿಂದ ಫೆ.14ರ ವರೆಗೆ ನಡೆಯಲಿದೆ ಎಂದು ಗುಡ್ಡೆಕೊಪ್ಲ ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪುಂಡಲೀಕ ಹೊಸಬೆಟ್ಟು ತಿಳಿಸಿದರು.ಅವರು ಸುರತ್ಕಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಸುಮಾರು 1.5 ಕೋಟಿ ರೂ. ವೆಚ್ಚದ ಯೋಜನೆಯನ್ನು ಅತ್ಯಲ್ಪ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಬಬ್ಬರ್ಯ ಬಬ್ಬರ್ಯ ಬಂಟ ದೈವ ಶಿಲಾಮಯ ಗುಡಿ, ನಾಗಗುಡಿ, ಕೊಡಿಯಡಿ, ಸುತ್ತು ಪೌಳಿ, ಚಾವಡಿ, ಆವರಣ ಗೋಡೆ, ಧ್ವಜಸ್ತಂಭ ಇತ್ಯಾದಿ ನಿರ್ಮಿಸಲಾಗಿದೆ ಎಂದರು.

ಆನಂತರ ಗುಡ್ಡೆಕೊಪ್ಲ ಮೊಗವೀರ ಸಂಘದ ಅಧ್ಯಕ್ಷ ಕೇಶವ ಕುಂದರ್ ಅವರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ಕ್ಷೇತ್ರಾಡಳಿತ ಸಮಿತಿಯ ಕಿಶೋರ್ ಗುರಿಕಾರ, ಜೀರ್ಣೋದ್ಧಾರ ಸಮಿತಿ ಮಾರ್ಗದರ್ಶಕ ಕೃಷ್ಣಪ್ಪ ಸಾಲ್ಯಾನ್, ಮುಂಬೈ ಸಮಿತಿಯ ಕಾರ್ಯದರ್ಶಿ ಕೃಷ್ಣ ಸುವರ್ಣ, ಗುಡ್ಡೆಕೊಪ್ಲ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ತ್ರಿಶೂಲ್ ಪಿ. ಕುಂದರ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *