Breaking News

ಗುತ್ತಿಗಾರಿನ ಪೈಕ ಸರಕಾರಿ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲ, ಮಕ್ಕಳನ್ನು ಶಾಲೆ ಬಿಡಿಸುತ್ತಿರುವ ಹೆತ್ತವರು


ಮುಚ್ಚುವ ಭೀತಿಯಲ್ಲಿ ಒಂದು ಕಡೆ ಸರಕಾರಿ ಶಾಲೆಗಳಿಗೆ ಮಕ್ಕಳು ಹೋಗುತ್ತಿಲ್ಲ. ಆದರೆ ಇಲ್ಲಿ ಸರಕಾರಿ ಶಾಲೆಯಲ್ಲೆ ಕಲಿಬೇಕು ಅನ್ನೋ ಮಕ್ಕಳು ಇದ್ದಾರೆ. ಇಲ್ಲಿನ ಮಕ್ಳಿಗೆ ಕಲಿಯಲು ಯಾವುದೇ ಸಮಸ್ಯೆ ಇಲ್ಲ. ಆ ಸಮಸ್ಯೆ ಇರೊದು ಸರಕಾರಿ ವೇತನ ಪಡೆದು ಕೈಕಟ್ಟಿ ಕುಳಿತಿರು ಶಿಕ್ಷಣ ಇಲಾಖೆ.
ನಮ್ಮ ಶಾಲೆಗೆ ಶಿಕ್ಷಕರನ್ನು ನೇಮಿಸಿ ಕೊಡಿ. ಹೀಗಂತ ಅಂಗಲಾಚಿ ಬೇಡಿಕೆ ಇಟ್ಟಿದ್ದು ಪೈಕ ಪರಿಸರದ ಜನರು. ಆದರೇ ಇದಕ್ಯಾವುದಕ್ಕೂ ಕ್ಯಾರೆ ಅನ್ನುತ್ತಿಲ್ಲ ಶಿಕ್ಷಣ ಇಲಾಖೆ. ಇದರಿಂದ ಬೇಸತ್ತ ಹೆತ್ತವರು ತಮ್ಮ ಮಕ್ಕಳನ್ನು ಈ ಶಾಲೆಯಿಂದ ಬಿಡಿಸಿ ಬೇರೆ ಸ್ಕೂಲ್‌ಗೆ ವರ್ಗಾಯಿಸುವುದಕ್ಕೆ ಮುಂದಾಗಿದ್ದಾರೆ. ಈ ದೃಶ್ಯ ಕಂಡು ಬಂದದ್ದು, ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತು ವ್ಯಾಪ್ತಿಯ ಪೈಕ ಎಂಬಲ್ಲಿ. ಇಲ್ಲಿ ನಿರ್ಮಾಣವಾದ ಸರಕಾರಿ ಶಾಲೆಯಲ್ಲೀಗ ಶಿಕ್ಷಕರು ಇಲ್ಲ. ಹಾಗಾಗಿ ಇಲ್ಲಿ ಮಕ್ಕಳ ಕಲಿಕೆಗೆ ತೊಂದರೆ ಆಗಿದೆ.
ಗ್ರಾಮೀಣ ಭಾಗದ ಪೈಕದಲ್ಲಿ ೧೯೭೭ರಲ್ಲಿ ಸರಕಾರಿ ಶಾಲೆ ಆರಂಭಗೊಂಡಿತ್ತು. ಸ್ಥಳಿಯ ದಾನಿಯೊಬ್ಬರು ಶಾಲೆಗೆ ಜಾಗ ನೀಡಿದ್ದರು. ಕಳೆದ ಶೈಕ್ಷಣಿಕ ವರ್ಷದತನಕ ಇಲ್ಲಿ ಏನೂ ಸಮಸ್ಯೆ ಇರಲಿಲ್ಲ. ಈ ಶೈಕ್ಷಣಿಕ ಅವಧಿಯಲ್ಲಿ ಉಂಟಾಗಿದೆ ಸಮಸ್ಯೆ. ಶಾಲೆಯಲ್ಲಿ ೮ ಗಂಡು ಹಾಗೂ ೪ ಹೆಣ್ಣು ಮಕ್ಕಳು ಸೇರಿ ೧೨ ಮಂದಿ ವಿದ್ಯಾರ್ಥಿಗಳಿದ್ದರು. ಇವರ ಪಾಠ ಕಲಿಕೆಗೆ ಅತಿಥಿ ಶಿಕ್ಷಕರ ಹೊರತು ಪಡಿಸಿ ಶಿಕ್ಷಣ ಇಲಾಖೆಯಿಂದ ಇದುವರೆಗೆ ಇಲ್ಲಿಗೆ ಅಧಿಕೃತ ಶಿಕ್ಷಕರ ನೇಮಕವಾಗಿಲ್ಲ. ಹೀಗಾಗಿ ಪಾಠ ಪ್ರವಚನಗಳಿಗೆ ಇಲ್ಲಿ ಅಡಚಣೆ ಆಗುತ್ತಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂದು ಆತಂಕಗೊಂಡ ಪೋಷಕರು ಇಲ್ಲಿನ ಶಾಲೆಯಿಂದ ಮಕ್ಕಳನ್ನು ಬಿಡಿಸಿ ಬೇರೆ ಶಾಲೆಗೆ ಸೇರಿಸಿದ್ದಾರೆ. ಶಾಲೆಯಲ್ಲಿ ಈಗ ಕೇವಲ ನಾಲ್ಕು ಮಕ್ಕಳು ಉಳಿದುಕೊಂಡಿದ್ದಾರೆ. ಬೇರೆ ಶಾಲೆಗೆ ಸೇರಿದ ಮಕ್ಕಳ ವರ್ಗಾವಣೆ ದಾಖಲೆ ಪತ್ರ ಇನ್ನೂ ಪೈಕ ಶಾಲೆಯಲ್ಲಿ ಉಳಿದುಕೊಂಡಿದೆ. ಹಾಗಾಗಿ ದಾಖಲಾತಿ ಒಂದು ಕಡೆ ಶಿಕ್ಷಣ ಪಡೆಯುವುದು ಇನ್ನೊಂದು ಕಡೆ ಆಗಿದೆ.
ಮಕ್ಕಳ ಪೋಷಕರು, ಊರವರು, ಎಸ್‌ಡಿಎಂಸಿ ಸಮಿತಿಯವರು ಸುಳ್ಯ ಶಿಕ್ಷಣ ಇಲಾಖೆಗೆ ಸಮಸ್ಯೆ ನಿವಾರಣೆಗೆ ದೂರು ನೀಡಿದ್ದರು. ಮನವಿ ಬಳಿಕವೂ ಅಧ್ಯಾಪಕರ ನೇಮಕವಾಗಿಲ್ಲ ಎಂದು ಪೋಷಕರು ಆರೋಪಿಸುತ್ತಾರೆ. ಇಷ್ಟು ಅವಧಿ ತನಕ ಹಾಗೋ ಹೀಗೋ ಗ್ರಾಮಸ್ಥರಿಗೆ ಅನುಕೂಲವಾಗಿದ್ದ ಈ ಶಾಲೆಗೆ ಇನ್ನೂ ಮುಂದೆ ಶಾಶ್ವತ ಬೀಗ ಮುದ್ರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಶಾಲೆಯನ್ನು ಉಳಿಸಿಕೊಳ್ಳಲು ಊರವರು ನಡೆಸಿದ ಪ್ರಯತ್ನ ಜನಪ್ರತಿನಿಧಿಗಳ ಅಸಹಕಾರದಿಂದ ಮುಚ್ಚುವ ಹಂತಕ್ಕೆ ಬಂದು ನಿಂತಿದೆ.

Related posts

Leave a Reply