Header Ads
Header Ads
Breaking News

ಗುತ್ತಿಗೆದಾರನ ಕಳಪೆಕಾಮಗಾರಿಗೆ ಮೂಕ ಸಾಕ್ಷಿಯಾದ ಕೆಜೆಎಂ ರಸ್ತೆ. ಎರಡೂವರೆ ಲಕ್ಷ ರೂಪಾಯಿಯಲ್ಲಿ ಕಾಮಗಾರಿಗೊಂಡ ರಸ್ತೆ

ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ6ನೇ ವಾರ್ಡಿನ ಕೆಜೆಎಂ ಮೈದಾನ್ ರಸ್ತೆ ಕಾಮಗಾರಿಯಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.ಮಂಜೇಶ್ವರ ಗ್ರಾ. ಪಂ. 2016-17 ಯೋಜನೆಯಲ್ಲಿ ಮಂಜೂರಾದ ಎರಡುವರೆ ಲಕ್ಷ ರೂ. ಫಂಡ್ ನಲ್ಲಿ ನಡೆಸಲಾದ ಗುತ್ತಿಗೆಗಾದರನ ಕಾಮಗಾರಿ ಪೂರ್ಣಗೊಂಡು ಕೇವಲ15ದಿವಸಗಳಲ್ಲೇ ಈ ರಸ್ತೆ ಸಂಪೂರ್ಣ ಹದೆಗೆಟ್ಟಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ. ಕೆ ಜೆ ಎಂ ರಸ್ತೆ ಒಂದನೇ ಕ್ರಾಸ್ ರಸ್ತೆಯಿಂದ ಮೂರನೇ ಕ್ರಾಸ್ ತನಕ ರಸ್ತೆ ಕಾಮಗಾರಿಯನ್ನು ನಡೆಸಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಕೂಡಾ ಇತ್ತ ಕಡೆ ಗಮನ ಹರಿಸಿಲ್ಲವೆಂಬ ಆರೋಪ ಕೂಡಾ ವ್ಯಾಪಕವಾಗಿದೆ. ಇದೀಗ ಈ ರಸ್ತೆ ಯಲ್ಲಿ ವಾಹನ ಸಂಚಾರಕ್ಕೂ ಸಾಧ್ಯವಾಗದೆ ಆಟೋ ರಿಕ್ಷಾ ಹಾಗೂ ಶಾಲಾ ವಾಹನಗಳು ಕೂಡಾ ಸಂಚಾರಕ್ಕೆ ಹಿಂದೇಟು ಹಾಕುತ್ತಿರುವುದಾಗಿ ಊರವರು ಹೇಳುತಿದ್ದಾರೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಊರವರು ವಿಜೆಲೆನ್ಸ್ ಮೊರೆ ಹೋಗಲು ತೀರ್ಮಾನಿಸಿದ್ದು ಮಾತ್ರವಲ್ಲದೆ ಪ್ರತಿಭಟನೆಗೂ ಸಜ್ಜಾಗುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

Related posts

Leave a Reply