Header Ads
Breaking News

ಗುತ್ತಿಗೆದಾರನ ಕಳಪೆ ಕಾಮಗಾರಿಯ ಅವಾಂತರ; ಕಾಮಗಾರಿಯ ಹಣ ಗಿಟ್ಟಿಸಲು ಬಂದ ಗುತ್ತಿಗೆದಾರನಿಗೆ ತಡೆ

ಮಂಜೇಶ್ವರ: ಕಾಸರಗೋಡು ಅಭಿವೃದ್ದಿ ಫಂಡ್‍ನಿಂದ ಹಾರ್ಬರ್ ಇಂಜಿನಿಯರುಗಳ ಉಸ್ತುವಾರಿಯಲ್ಲಿ ಲಕ್ಷಾಂತರ ರೂ.ಗಳ ಫಂಡಿನಿಂದ ಮಂಜೂರಾದ ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಹೊಂಡ ಗುಂಡಿಯಿಂದ ಆವೃತ್ತವಾಗಿದೆ.

ಕಾಸರಗೋಡು ಅಭಿವೃದ್ದಿ ಫಂಡ್‍ನಿಂದ ಹಾರ್ಬರ್ ಇಂಜಿನಿಯರುಗಳ ಉಸ್ತುವಾರಿಯಲ್ಲಿ ಲಕ್ಷಾಂತರ ರೂ.ಗಳ ಫಂಡಿನಿಂದ ಮಂಜೂರಾದ ತೂಮಿನಾಡು ಪದವು ಕಾಂಕ್ರೀಟ್ ರಸ್ತೆಯನ್ನು ವರ್ಷಗಳ ಹಿಂದೆ ಗುತ್ತಿಗೆದಾರ ಕಳಪೆಕಾಮಗಾರಿಯನ್ನು ಪ್ರದರ್ಶಿಸಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೇವಲ ಒಂದು ವಾರದಲ್ಲೇ ರಸ್ತೆಯ ಕಾಂಕ್ರಿಟ್ ಹದೆಗೆಟ್ಟಿತ್ತು. ಈ ಬಗ್ಗೆ ಊರವರು ಗುತ್ತಿಗೆದಾರನಲ್ಲಿ ವಿಚಾರಿಸಿದಾಗ ಯಾವೊಂದು ಪ್ರತಿಕ್ರಿಯೆಯನ್ನು ಕೂಡಾ ನೀಡದೆ ಅರ್ಧಂಬರ್ಧ ಕೆಲಸ ಮಾಡಿ ಕೈ ತೊಳೆದು ಹೋಗಿದ್ದ.

ಇದೀಗ ಈ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟು ಅಲ್ಲಲ್ಲಿ ಬಿರುಕು ಕಾಣಿಸಿಕೊಂಡು ಕೆಲವೆಡೆಗಳಲ್ಲಿ ಬೃಹತಾದ ಹೊಂಡಗಳು ಪ್ರತ್ಯಕ್ಷಗೊಂಡಿವೆ. ಈ ಹಿನ್ನೆಲೆಯಲ್ಲಿ ರಸ್ತೆಯ ಹೊಂಡವನ್ನು ಮುಚ್ಚುವುದಾಗಿ ಕೇವಲ ಸಿಮೆಂಟಿನ ಲೇಪವನ್ನು ಹಾಕಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಲು ಆಗಮಿಸಿದ ಗುತ್ತಿಗೆದಾರನ ಕಾರ್ಮಿಕರನ್ನು ಊರವರು ತಡೆದು ಇಂತಹ ಕಾಮಗಾರಿಯ ಅಗತ್ಯವಿಲ್ಲವೆಂದು ಹೇಳಿ ತಿರುಗಿ ಕಳುಹಿಸಿದ್ದಾರೆ. ಇದೀಗ ಪುನರ್ ನವೀಕರಿಸಿರುವುದಾಗಿ ತೋರಿಸಿ ಲಕ್ಷಾಂತರ ರೂ. ಸರಕಾರದಿಂದ ಮರಳಿ ಪಡೆಯುವ ಯತ್ನವನ್ನು ಊರವರು ವಿಫಲಗೊಳಿಸಿದ್ದಾರೆ. ಸರಿಯಾದ ವೈಜ್ಞಾನಿಕವಾದ ರೀತಿಯಲ್ಲಿ ಕಾಮಗಾರಿಯನ್ನು ನಡೆಸುವುದಿದ್ದರೆ ಮಾತ್ರ ಬಂದರೆ ಸಾಕು ಇಲ್ಲವಾದರೆ ನಮಗೆ ರಸ್ತೆಯ ಅಗತ್ಯವಿಲ್ಲವೆಂಬುದಾಗಿ ಊರವರು ತಾಕೀತು ನೀಡಿದ್ದಾರೆ.

Related posts

Leave a Reply

Your email address will not be published. Required fields are marked *