Header Ads
Header Ads
Breaking News

ಗುತ್ತಿಗೆ ಕಂಪೆನಿಯ ನಾಟಕಗಳನ್ನು ಸಹಿಸಲ್ಲ:ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ

ಕುಂದಾಪುರ: ಚತುಷ್ಪತ ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆಗಳು ನಡೆಯುತ್ತಿದೆ. ಜನರ ರಕ್ಷಣೆಗೆ ಆದ್ಯತೆ ನೀಡದೆ ಅವೈಜ್ಙಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಗುತ್ತಿಗೆ ಕಂಪೆನಿಯ ನಾಟಕ ಹೆಚ್ಚು ದಿನ ನಡೆಯಲ್ಲ ಮತ್ತು ಈ ಎಲ್ಲಾ ನಾಟಕಗಳನ್ನು ನಾವು ಸಹೊಸೋದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ನ್ಯಾಯಯುತವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಾಪ ಶೆಟ್ಟಿಯವರ ನೇತೃತ್ವದಲ್ಲಿ ಸಾಕಷ್ಟು ಪ್ರತಿಭಟನೆಗಳ ಈ ಹಿಂದೆ ನಡೆದಿದ್ದವು. ಇಂದು ಕೂಡ ದೊಡ್ಡ ಸಂಖ್ಯೆಯಲ್ಲಿ ನೀವೆಲ್ಲರೂ ಸೇರಿದ್ದೀರಿ. ಜಿಲ್ಲಾಡಳಿತ ಹಾಗೂ ಎಸ್ಪಿ ಯವರಿಗೆ ಪ್ರತಿಭಟನೆಯನ್ನು ಹತ್ತಿಕ್ಕಬೇಡಿ ಎಂದು ಮನವಿ ಮಾಡಿರುವೆ.

ಒಂದು ವೇಳೆ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕದ್ದರೆ ಸಾರ್ವಜನಿಕರೊಂದಿಗೆ ನಾನೂ ಕೂಡ ಜೈಲಿಗೆ ಹೋಗಲು ಸಿದ್ದನಿರುವೆ ಎಂದು ಕೋಟ ಹೇಳಿದರು.ಟೋಲ್ ಗೇಟ್ ವಿಚಾರದಲ್ಲಿ ಜಿಲ್ಲಾಧಿಕಾರಿ ಹಾಗೂ ನವಯುಗ ಗುತ್ತಿಗೆ ಕಂಪೆನಿ ಸರ್ವಾಧಿಕಾರಿ ಧೋರಣೆ ತೋರುತ್ತಿದೆ ಎಂದು ಜಿಲ್ಲಾಡಳಿತದ ವಿರುದ್ದ ಕೋಟ ಹರಿಹಾಯ್ದರು. ಸರ್ವೀಸ್ ರಸ್ತೆ, ಫ್ಲೈ ಓವರ್, ಮೂಲಭೂತ ಸೌಕರ್ಯ ಒದಗಿಸದೆ ಟೋಲ್ ಸಂಗ್ರಹ ಮಾಡುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದು ದರೋಡೆಯಂತಹ ಈ ಧೋರಣೆಯನ್ನು ಜನರು ಸಹಿಸುವುದಿಲ್ಲ ಎಂದರು.ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ನ್ಯಾಯವಾದಿಗಳಾದ ಶ್ಯಾಮಸುಂದರ ನಾಯರಿ, ಬನ್ನಾಡಿ ಸೋಮನಾಥ ಹೆಗ್ಡೆ, ಉಡುಪಿ ಜಿಲ್ಲಾ ಲಾರಿ ಮಾಲಕ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಜಿ.ಪಂ ಸದಸ್ಯರಾದ ರಾಘವೇಂದ್ರ ಬಾರಿಕೆರೆ, ಜ್ಯೋತಿ, ಜಯಕರ್ನಾಟಕ ಸಂಘಟನೆಯ ಸತೀಶ್ ಪೂಜಾರಿ ಮೊದಲಾದವರು ಇದ್ದರು.

Related posts

Leave a Reply