Header Ads
Header Ads
Breaking News

ಗುರುಕುಲ ವಿದ್ಯಾಸಂಸ್ಥೆಯಲ್ಲಿ ಧಾನ್ಯ ಸಿರಿ ಕಾರ್ಯಕ್ರಮ ಕುಂದಾಪುರದಲ್ಲಿ ಆಹಾರ ತಜ್ಞ ಡಾ. ಖಾದರ್ ಉಪನ್ಯಾಸ

ಕುಂದಾಪುರದ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ದಾನ್ಯ ಸಿರಿ ಕಾರ್ಯಕ್ರಮವನ್ನ ಮೈಸೂರಿನ ಹಿರಿಯ ಆಹಾರ ತಜ್ಞ ಡಾ. ಖಾದರ್ ಉಪನ್ಯಾಸ ನೀಡಿದರು.ಜೀವನ ಶೈಲಿಯ ಬದಲಾವಣೆಯಿಂದ ನಮ್ಮ ಆರೋಗ್ಯದಲ್ಲಿ ಬದಲಾಗಿ ನಮ್ಮ ದೇಹದಲ್ಲಿ ಕೂಡ ವ್ಯತಿರಿಕ್ಯ ಬದಲಾಬಣೆಯುಂಟಾಗಿದೆ. ಇದರ ಪರಿಣಾಮ 6-7 ವರ್ಷದೊಳಗೆ ಹೆಣ್ಣು ಮಕ್ಕಳು ದೊಡ್ಡವರಾಗುತ್ತಿದ್ದು, ಈ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಿಲ್ಲ.

ನಾವು ಈ ಹಿಂದೆ ಸೇವಿಸುತ್ತಿದ್ದ ಆಹಾರ ಪದ್ದತಿಗಳನ್ನ ವೈದ್ಯರು ಮತ್ತು ಕೆಲ ಆಹಾರ ತಜ್ಞರು ಬದಲಾಯಿಸುತ್ತಾರೆ. ತೆಂಗಿನ ಹಾಲು ಮತ್ತು ಕೆಲ ಎಣ್ಣೆಗಳ ಸೇವನೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ಅಧಿಕಗೊಳಿಸಲು ಕಾರಣ ಎನ್ನುತ್ತಾರೆ . ಆದರೆ ಈ ಎಣ್ಣೆಗಳು ಒಳ್ಳೆ ಕೊಲೆಸ್ಟರಾಲ್ ಹೊಂದಿದೆ. ಈ ಹಿಂದೆ ಶಿಲೀಂದ್ರ ಮೊದಲಾದ
ಕೀಟನಾಶಕಗಳು ಈ ಹಿಂದೆ ನೀರಿನಲ್ಲಿ ಕರಗುವ ಶಕ್ತಿಯನ್ನು ಹೊಂದಿರಲಿಲ್ಲ ಆದರೆ ಕೆಲ ವಿಜ್ಞಾನಿಗಳು ಅದನ್ನು ಕರಗುವಂತೆ ಮಾಡಿ ವಿಷಕಾರಿ ಅಂಶಗಳು ವಿಶ್ವಾದ್ಯಂತ ಹಬ್ಬುವಂತೆ ಮಾಡಿದ್ದಾರೆ ಎಂದರು. ಈ ಸಂದರ್ಭ ಭಾಂಡ್ಯ ಎಜುಕೇಶನ್ ಟ್ರಸ್ಟನ ಅಪ್ಪಣ್ಣ ಹೆಗ್ಡೆ, ಆಡಳಿತ ಮಂಡಳಿಯ ಅನುಪಮ ಶೆಟ್ಟಿ ಸುಭಾಷ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.