Header Ads
Header Ads
Breaking News

ಗುರುಪುರ: ಸಂಘ ಪರಿವಾರದ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

ಕಡಲ ತಡಿಯಲ್ಲಿ ಮತ್ತೆ ತಲ್ವಾರ್ ಸದ್ದು ಮಾಡಿದೆ. ಸೋಮವಾರ ಬೆಳಗ್ಗೆಯಷ್ಟೇ ಮೂಡಬಿದ್ರೆ ಗಂಟಲ್ ಕಟ್ಟೆಯಲ್ಲಿ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಇಮ್ತಿಯಾಜ್ ಹತ್ಯೆ ಯತ್ನ ನಡೆದಿತ್ತು. ಇದೇ ಬೆನ್ನಲ್ಲೇ ಹಿಂದೂ ಮುಖಂಡನ ಹತ್ಯೆಗೆ ದುಷ್ಕರ್ಮಿಗಳ ತಂಡವೊಂದು ಯತ್ನಿಸಿದ ಘಟನೆ ಮಂಗಳೂರಿನ ಸೂರಲ್ಪಾಡಿ ಸಮೀಪದಲ್ಲಿ ನಡೆದಿದೆ. ಬಸ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೊಳಲಿ ನಿವಾಸಿ ಹರೀಶ್ ಶೆಟ್ಟಿ ದಾಳಿಗೊಳಗಾದವರು. ಇವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಎರಡು ಬೈಕ್ ನಲ್ಲಿ ಬಂದ ತಂಡವೊಂದು ತಲ್ವಾರ್ ಬೀಸಿ ಪರಾರಿಯಾಗಿದ್ದಾರೆ. 

ಪರಿಣಾಮ ಹರೀಶ್ ಶೆಟ್ಟಿ ಕೈ ಹಾಗೂ ತಲೆಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯ ಹಿಂದೂ ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆಗೆ ಕಡೆ ಧಾವಿಸಿದ್ರು. ಇದೇ ವೇಳೆ ಶಾಸಕರಾದ ಉಮಾನಾಥ ಕೊಟ್ಯಾನ್, ವೇದವ್ಯಾಸ್ ಕಾಮತ್ ಹಾಗೂ ಭರತ್ ಶೆಟ್ಟಿ ಎಜೆ ಆಸ್ಪತ್ರೆಗೆ ಆಗಮಿಸಿ ಹರೀಶ್ ಶೆಟ್ಟಿ ಬಳಿ ಮಾಹಿತಿ ಪಡೆದ್ರು. ಹತ್ಯೆಗೆ ಯತ್ನಿಸಿದ ದುಷ್ಕರ್ಮಿಗಳನ್ನ ಶೀಘ್ರ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Related posts

Leave a Reply