Header Ads
Header Ads
Breaking News

ಗುರುಪುರ ಸೇತುವೆ ಕುಸಿದು ಬಿದ್ದರೆ ಯಾರು ಹೊಣೆ? ಸಂಸದರನ್ನು ಪ್ರಶ್ನಿಸಿದ ಐವನ್ ಡಿ”ಸೋಜಾ

ಮೂಡುಬಿದಿರೆ: ಗುರುಪುರ ಸೇತುವೆ ಕುಸಿದು ಬೀಳುವ ಹಂತದಲ್ಲಿದೆ ಎಂದು ಎನ್‌ಐಟಿಕೆಯ ಇಂಜಿನಿಯರ್‌ಗಳೇ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸೇತುವೆ ಕುಸಿದು ಬಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಅವರು ಸಂಸದರು ಕೂಡಲೇ ಮಧ್ಯ ಪ್ರವೇಶಿಸಿ ಚತುಷ್ಪಥ ರಸ್ತೆ ಕಾಮಗಾರಿಗೆ ಚುರುಕು ಮುಟ್ಟಿಸಬೇಕೆಂದು ಹೇಳಿದರು.ಜನಸ್ಪಂದನ ಕಛೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ನ್ನು ಮೇಲ್ದರ್ಜೆಗೇರಿಸಿ 19 ವರ್ಷಗಳಾಗಿದ್ದು 102 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರವು 147.16 ಕೋಟಿ ರೂಪಾಯಿ ಮಂಜೂರುಗೊಳಿಸಿದ್ದು ರಸ್ತೆ ದುರಸ್ತಿಗಾಗಿ 125ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಚತುಷ್ಪಥಗೊಳಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ. ಚತುಷ್ಪಥ ರಸ್ತೆಯನ್ನು ಕಾಲ ಮಿತಿಯೊಳಗೆ ಮಾಡಿದರೆ ರಸ್ತೆ ಅಭಿವೃದ್ಧಿಗಾಗಿ ಇಷ್ಟು ದೊಡ್ಡ ಮೊತ್ತವನ್ನು ವ್ಯಯ ಮಾಡುವುದು ತಪ್ಪುತ್ತದೆ. ಹಳೆ ರಸ್ತೆಗೆ ಇಷ್ಟು ದೊಡ್ಡ ಮೊತ್ತದ ಹಣ ಖರ್ಚಾಗಿರುವ ಬಗ್ಗೆ ಸಂಶಯವಿದ್ದು ಈ ಬಗ್ಗೆ ತನಿಖೆಯಾಗಬೇಕು.
ವರದಿ: ಪ್ರೇಮಶ್ರೀ ಮೂಡಬಿದರೆ.

Related posts

Leave a Reply