Header Ads
Header Ads
Header Ads
Breaking News

ಗುರುಪುರ ಹೋಬಳಿಯನ್ನು ಮಂಗಳೂರಿನಲ್ಲೇ ಉಳಿಸಲು ಆಗ್ರಹ

ಮೂಡಬಿದ್ರೆಯು ತಾಲೂಕಾಗಿ ರಚೆನೆಯಾದ ನಂತರ ಸರಕಾರವು ಮಂಗಳೂರು ತಾಲೂಕಿಗೆ ಒಳಪಟ್ಟಿದ್ದ ಗುರುಪುರ ಹೋಬಳಿಯನ್ನು ಮೂಡಬಿದ್ರೆಗೆ ಸೇರಿಸಲು ಪ್ರಸ್ತಾಪ ಹೊರಡಿಸಿದ ವಿಷಯವಾಗಿ ಗುರುಪುರ ಹೋಬಳಿಯನ್ನು ಮಂಗಳೂರಿನಲ್ಲೇ ಉಳಿಸುವ ಬಗ್ಗೆ ಮಂಗಳೂರು ಉತ್ತರ ಶಾಸಕರಾದ ಶ್ರೀ ಮೊಹಿದಿನ್ ಬಾವ ರವರ ಅದ್ಯಕ್ಷತೆಯಲ್ಲಿ ಸಮಾಲೋಚನಾ ಸಭೆಯು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮೊಹಿದಿನ್ ಬಾವ ಗುರುಪುರ ಹೋಬಳಿಯನ್ನು ಮಂಗಳೂರು ತಾಲೂಕಿನಲ್ಲೇ ಉಳಿಸುವ ನಿಟ್ಟಿನಲ್ಲಿ ಸಂವಿಧಾನಾತ್ಮಕ ವಾಗಿ ಎಲ್ಲರೂ ಕೈ ಜೋಡಿಸುವ ಹಾಗೂ ಇದಕ್ಕೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ವಿಚಾರ ಮಂಡಿಸುವ ಎಂದು ತಿಳಿಸಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಂದ್ರ ಕಂಬಳಿ ಹಾಗೂ ಮಾಜಿ ಅಧ್ಯಕ್ಷ ಕೆಪಿಸಿಸಿ ಸದಸ್ಯರಾದ ಪೃಥ್ವಿರಾಜ್ ರವರು ವಿಷಯ ಪ್ರಸ್ತಾಪಿಸಿದರು..

ವೇದಿಕೆಯಲ್ಲಿ ಮಂಗಳೂರು ತಾಲೂಕ್ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಸದಸ್ಯ ಯು ಪಿ ಇಬ್ರಾಹಿಂ, ಗುರುಪುರ ಬ್ಲಾಕ್ ಕಾಂಗ್ರೆಸ್ ಪ್ರ ಕಾರ್ಯದರ್ಶಿ ಮೆಲ್ವಿನ್ ಡಿಸೋಜಾ, ಉತ್ತರ ಯುವ ಕಾಂಗ್ರೆಸ್ ಅದ್ಯಕ್ಷ ಗಿರೀಶ್ ಆಳ್ವ, ವಕ್ತಾರ ಗಣೇಶ್ ಪೂಜಾರಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೆಲಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು .

Related posts

Leave a Reply