Header Ads
Header Ads
Breaking News

ಗೂನಡ್ಕ ತೆಕ್ಕಿಲ್ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಯಾರು ಜಾತಿ ರಾಜಕೀಯ ಮಾಡಬಾರದು, ನಾವೇಲ್ಲರು ಭಾರತೀಯರು ಎಂಬ ಭಾವನೆ ಮುಖ್ಯ ಜಾತಿ ರಾಜಕೀಯ ಮಾಡದೆ ದೇಶ ಕಟ್ಟುವ ಮೂಲಕ ದೇಶಕ್ಕೆ ಒಳ್ಳೆಯ ಹೆಸರು ತರುವ ಎಂದು ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ,ವಕ್ಸ್ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.ಅವರು ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಸಮೂಹ ಶಿಕ್ಷಣ ಸಂಸ್ಥೆಯ ರೂ.2 ಕೋಟಿ ವೆಚ್ಚದ ನೂತನ ಶಾಲಾ ಅಭಿವೃದ್ದಿ ಕಾಮಗಾರಿಗಳ ಉದ್ಘಾಟೆಯನ್ನು ನೆರವೇರಿಸಿ ಮತ್ತು ಶಾಲೆಗೆ ತನ್ನ ವೈಯಕ್ತಿಕವಾಗಿ ನಗದು ರೂ.೫ ಲಕ್ಷ ಹಾಗೂ ತಾಲೂಕು ಮಟ್ಟದಲ್ಲಿ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸುಮಾರು ಒಂದು ಲಕ್ಷ ರೂ ನಗದು ವಿತರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸಚಿವರನ್ನು ಶಾಲಾ ವತಿಯಿಂದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಸನ್ಮಾನಿಸಿದರು.ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾಮೇದಪ್ಪ, ದ.ಕ ಜಿಲ್ಲಾ ವಕ್ಸ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply