Header Ads
Header Ads
Breaking News

ಗೂನು ಬೆನ್ನು ವ್ಯಾದಿಗೆ ಒಳಗಾದ ಬಾಲಕಿ ಬಡ ಕುಟುಂಬಕ್ಕೆ ಬೇಕಾಗಿದೆ ದಾನಿಗಳ ಸಹಾಯಹಸ್ತ

ಆಕೆ ಉಡುಪಿ ಬಾಲಕೀಯರ ಪ್ರೌಢ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತೆ ವಿದ್ಯಾರ್ಥಿನಿ ಆಗಿದ್ದಾಳೆ. ಹುಟ್ಟಿನಿಂದಲೇ ಆರೋಗ್ಯವಾಗಿದ್ದ ಸೌಂದರ್ಯ ಇದ್ದಕ್ಕಿದ್ದಂತೆ ಗೂನು ಬೆನ್ನು ವ್ಯಾದಿಗೆ ತ್ತುತ್ತಾಗಿ ಅಸಾಹಯಕ ಸ್ಥಿತಿಯಲ್ಲಿ ಇದ್ದಾಳೆ. ಇದೀಗ ಸೌಂದರ್ಯಳ ಗೂನು ಬೆನ್ನು ಶಸ್ತ್ರಚಿಕಿತ್ಸೆಗೆ ಬೇಕಾಗಿದೆ ದಾನಿಯಳ ಸಹಾಯಹಸ್ತಕಾಪು ತಾಲೂಕಿನ ಕಳತ್ತೂರು ಗ್ರಾಮದ ನಿವಾಸಿಗಳಾಗಿರುವ, ಸದಾಶಿವ ನಾಯಕ್, ಲಕ್ಷ್ಮೀ ದಂಪತಿಗಳ ಏಕೈಕ ಪುತ್ರಿ ಸೌಂದರ್ಯ ಉಡುಪಿ ಬಾಲಕೀಯರ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತೆ ವಿದ್ಯಾರ್ಥಿನಿ ಆಗಿದ್ದಾಳೆ. ಹುಟ್ಟಿನಿಂದ ಆರೋಗ್ಯವಾಗಿದ್ದ ಸೌಂದರ್ಯ ಇವಾಗ ಇದ್ದಕಿದ್ದಂತೆ ಗೂನು ಬೆನ್ನು ವ್ಯಾಧಿಗೆ ತುತ್ತಾಗಿ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಾಳೆ. ಹೆತ್ತವರು ಮಗಳನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ತಜ್ಞ ವೈದ್ಯರಲ್ಲಿ ತೋರಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಬೆನ್ನು ಮೂಳೆ ಮುರಿತವಾಗಿದೆ. ಶಸ್ತ್ರ ಚಿಕಿತ್ಸೆ ನಡೆಸ ಬೇಕು, ಸುಮಾರು ೨ ಲಕ್ಷದ ೫೦ ಸಾವಿರ ಖರ್ಚು ತಗಲಲಿದೆ ಎಂದು ವೈದ್ಯರು ಹೇಳಿದ್ದಾರೆ.ಸೌಂದರ್ಯಳ ತಂದೆ ಸದಾಶಿವ ನಾಯಕ್ ಕೂಲಿ ಕೆಲಸ ಮಾಡಿಕೊಂಡು ಕಷ್ಟಕರವಾಗಿ ಬದುಕು ಸಾಗಿಸುತ್ತಿದ್ದಾರೆ. ತಾಯಿ ಅವರು ಮನೆವಾರ್ತೆ ನೋಡು ಕೊಳ್ಳುತ್ತಿದ್ದಾರೆ. ಇವರ ಕುಟುಂಬಕ್ಕೆ ಬೇರೆ ಯಾವ ಆದಾಯ ಮೂಲಗಳಿಲ್ಲ. ಹಾಗಾಗಿ ಮಗಳ ಚಿಕಿತ್ಸೆಗೆ ತಗಲುವ ಅಷ್ಟೊಂದು ದೊಡ್ಡ ಮಟ್ಟದ ಹಣವನ್ನು ಜೋಡಿಸಲು ಬಡ ಕುಟುಂಬಕ್ಕೆ ಅಸಾಧ್ಯವಾಗಿದೆ. ಈ ಕುಟುಂಬವು ದಿಕ್ಕು ಕಾಣದೆ ತಮ್ಮ ಅಳಲನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಅವರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಸಾರ್ವಜನಿಕರಿಂದ ನೆರವು ಯಾಚಿಸಿದ್ದಾರೆ.ಸಹೃದಯಿ ಬಂಧುಗಳು, ಸಾರ್ವಜನಿಕರು, ವಿದ್ಯಾರ್ಥಿ ಸಂಘಟನೆಗಳು, ಸಮಾಜಮುಖಿ ಸಂಘ ಸಂಸ್ಥೆಗಳು, ದಾನಿಗಳು ಸೌಂದರ್ಯಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಬೇಕಾಗಿದೆ. ವಿದ್ಯಾರ್ಥಿನಿ ಸಮಾಜದ ಮುಖ್ಯವಾಹಿನಿಯಲ್ಲಿ ಆರೋಗ್ಯಕರವಾಗಿ ನೆಲೆ ಕಲ್ಪಿಸಲು ಸಹಕರಿಸ ಬೇಕಾಗಿದೆ ಎಂದು ಸೌಂದರ್ಯಳ ಪರವಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ವಿನಂತಿಸಿದೆ.
ಅವರ ಬ್ಯಾಂಕ್ ಖಾತೆ ವಿವರ:- ಸೌಂದರ್ಯ  ಸದಾಶಿವ ನಾಯಕ್
ಸಿಂಡಿಕೇಟ್ ಬ್ಯಾಂಕ್ ಕಲ್ಯಾಣಪುರ ಶಾಖೆ, ಖಾತೆ ಸಂಖ್ಯೆ:-

A/C No : 01442250007665, IFSC NO- SYNB0000144

ಸಂಪರ್ಕ ಸಂಖ್ಯೆ:- ಲಕ್ಷ್ಮೀ ನಾಯಕ್-9900976615

Related posts

Leave a Reply