Header Ads
Breaking News

ಗೃಹರಕ್ಷಕದಳದ ಜಿಲ್ಲಾ ಕಚೇರಿಗೆ ಡಿಐಜಿಪಿ ರಾಜಪ್ಪ ಭೇಟಿ

ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಚುನಾವಣಾ ಭದ್ರತೆಗಾಗಿ ಎಂಟುನೂರು ಇಪ್ಪತ್ತಾರು ಸಿಬ್ಬಂದಿ ನಿಯೋಜಿಸಲಾಗುವುದು. ರಾಜ್ಯದಲ್ಲಿ ಒಟ್ಟು 23ಸಾವಿರ ಸಿಬ್ಬಂದಿ ಗಳನ್ನು ಚುನಾವಣಾ ಭದ್ರತೆಗೆ ಬಳಸಲಾಗುತ್ತದೆ. ಇನ್ನೂ ಕೇರಳದಲ್ಲಿ ನಡಿಯೋ ಎರಡನೇ ಹಂತದ ಚುನಾವಣೆಗೆ ಜಿಲ್ಲೆಯಿಂದ300ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಗೃಹ ರಕ್ಷಕ ದಳ ಡಿಐಜಿಪಿ ರಾಜಪ್ಪ ಹೇಳಿದರು.

ಅವರು ಮಂಗಳೂರು ಗೃಹ ರಕ್ಷಕ ದಳ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ನಡೆಸಿ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿಗಳಿಗೆ ನೀಡುವಂತಹ ವ್ಯವಸ್ಥೆ ಗೃಹ ರಕ್ಷಕ ಸಿಬ್ಬಂದಿಗಳಿಗೆ ನೀಡಲಾಗಿದೆ. ಚುನಾವಣಾ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸ್ ಅಧಿಕಾರಿ ಆದೇಶದಂತೆ ಗೃಹ ರಕ್ಷಕ ಸಿಬ್ಬಂದಿಗಳಿಂದ ಲಂಚ ಸ್ವೀಕರ ವಿಚಾರರದಲ್ಲಿ ಎಚ್ಚರಿಕೆ ನೀಡಲಾಗುವುದು. ಕೇವಲ ಚೆಕ್ ಪೋಸ್ಟ್‌ಗಳಲ್ಲಿ ಅಧಿಕಾರಿಗಳ ಆದೇಶದ ಮೇಲೆ ವಾಹನ ತಪಾಸಣೆ ಮಾಡುವುದು. ಲಂಚ ಸ್ವೀಕಾರದ ಬಗ್ಗೆ ಮಾಹಿತಿ ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುದು ಎಂದು ಹೇಳಿದರು.

Related posts

Leave a Reply

Your email address will not be published. Required fields are marked *