Header Ads
Header Ads
Breaking News

ಗೃಹೋಪಯೋಗಿ ವಸ್ತುಗಳ ಮಳಿಗೆ ಸಂಭ್ರಮ ಎಲೆಕ್ಟ್ರಾನಿಕ್ಸ್. ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮಳಿಗೆ. ನೂತನವಾಗಿ ಪೀಠೋಪಕರಣಗಳ ಮಳಿಗೆ ಆರಂಭ.

ಬಂಟ್ವಾಳ: ಕಲ್ಲಡ್ಕದ ಹೆಸರಾಂತ ಎಲೆಕ್ಟ್ರೋನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆ ಸಂಭ್ರಮ ಎಲೆಕ್ಟ್ರಾನಿಕ್ಸ್ ಎಂಟನೆ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದೆ. ಈ ಸುಂದರ್ಭದಲ್ಲಿ ತನ್ನೆಲ್ಲಾ ಗ್ರಾಹಕರಿಗೆ ಎಲೆಕ್ಟ್ರೋನಿಕ್ಸ್ ವಸ್ತುಗಳ ಜೊತೆಗೆ ಪಿಠೋಪಕರಣಗಳನ್ನು ಒಂದೇ ಸೂರಿನಡಿ ದೊರಕಿಸಿ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದು ನೂತನವಾಗಿ ಪಿಠೋಪಕರಣಗಳ ಮಳಿಗೆಯನ್ನು ಆರಂಭಿಸಿದೆ. ಕಳೆದ ಏಳು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪೇಟೆಯಲ್ಲಿ ಆರಂಭಗೊಂಡ ಸಂಭ್ರಮ ಎಲೆಕ್ಟ್ರಾನಿಕ್ಸ್ ತನ್ನ ಮಾರಾಟ ಹಾಗೂ ಸೇವೆಯಿಂದ ಕಡಿಮೆ ಅವಧಿಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಲ್ಲಡ್ಕದ ಸುತ್ತಮುತ್ತಲಿನ ಪರಿಸರದ ಜನರು ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳಿಗೆ ಸಂಭ್ರಮವನ್ನೇ ಮೆಚ್ಚಿಕೊಳ್ಳುವ ಮೂಲಕ ಮನೆಮಾತಾಗಿದೆ. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅದೇ ಸ್ಥಳದಲ್ಲಿ ವಿಸ್ತೃತ ಹಾಗೂ ಸುಸಜ್ಜಿತ ಪಿಠೋಪಕರಣಗಳ ಮಳಿಗೆಯನ್ನು ತೆರೆದಿದ್ದು ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ. ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಎಲೆಕ್ಟ್ರಾನಿಕ್ಸ್ ವಸ್ತುಗಳ ಜೊತೆಗೆ ಸೋಫಾಸೆಟ್, ಡೈನಿಂಗ್ ಟೇಬಲ್, ಸ್ಟೀಲ್ ಕಪಾಟು ಮೊದಲಾದ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. ಎಲ್ಲಾ ವರ್ಗದ ಜನರ ಮನಸ್ಸಿಗೆ ಒಪ್ಪುವ ಗೃಹಪಯೋಗಿ ವಸುಗಳು ಕಡಿಮೆ ದರದಲ್ಲಿ ಲಭ್ಯವಿದ್ದು ಸುಲಭ ಕಂತುಗಳು, ೦ ಬಡ್ಡಿ ದರ ಹಾಗೂ ಲಕ್ಕಿಸ್ಕೀಂಗಳ ಮೂಲಕ ವಸ್ತುಗಳನ್ನು ಮನೆಗೊಯ್ಯಬಹುದಾಗಿದೆ. ಸಂಭ್ರಮ ಎಲೆಕ್ಟ್ರೋನಿಕ್ಸ್ ಮಾಲಕ ಗಿರೀಶ್ ಅವರು ವಿ4ನ್ಯೂಸ್‌ನೊಂದಿಗೆ ಮಾತನಾಡಿ ಸಂಭ್ರಮ ಎಲೆಕ್ಟ್ರಾನಿಕ್ಸ್‌ನಲ್ಲಿ ಪಿಠೋಪಕರಣಗಳು ಹಾಗೂ ಹೋಮ್ ಅಪ್ಲಯನ್ಸ್ ನ ನೂತನ ಮಳಿಗೆಯನ್ನು ಸ್ಥಾಪಿಸಲಾಗಿದೆ. ಆಗಸ್ಟ್13 ರಿಂದ ಆಗಸ್ಟ್ 18ರವರೆಗೆ ವಿಶೇಷ ದರಕಡಿತದ ಮಾರಾಟ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಇದೇ ಸಂದರ್ಭ ಬಟರ್‌ಪ್ಲೈ ಕಂಪೆನಿಯ ಗೃಹಪಯೋಗಿ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ ಆಗಸ್ಟ್ರ18ವರೆಗೆ ವಿಶೇಷ ರಿಯಾಯಿತಿ ದರದ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು ಗ್ರಾಹಕರಿಗೆ ಪ್ರತಿ ದಿನ ಚಿನ್ನದ ನಾಣ್ಯ ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ.

Related posts

Leave a Reply