Header Ads
Breaking News

ಗೆಲುವು ಸಾಧಿಸುವ ಉದ್ದೇಶದಿಂದ ವಾಮಚಾರ; ಸಿಸಿ ಕ್ಯಾಮರಾದ ಸಹಾಯದಿಂದ ಸಿಕ್ಕಿಬಿದ್ದ ವ್ಯಕ್ತಿ

ಬಂಟ್ವಾಳ: ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ವಾಮಚಾರ ನಡೆಸಿ, ಸಿಸಿ ಕ್ಯಾಮರದ ಸಹಾಯದಿಂದ ಸಿಕ್ಕಿಬಿದ್ದು ಇದೀಗ ತಮ್ಮಿಂದ ತಪ್ಪಾಗಿದೆ ಎಂದು ವಿಶೇಷ ಸಭೆಯಲ್ಲಿ ತಪ್ಪೊಪ್ಪಿಗೆ ಪತ್ರ ನೀಡಿದ ವಿಲಕ್ಷಣ ಘಟನೆಯೊಂದು ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ನಡೆದಿದೆ.

 

ಮಣಿನಾಲ್ಕೂರು ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ವಾಮಚಾರ ನಡೆಸಿರುವುದಾಗಿ ಮಣಿನಾಲ್ಕೂರು ಗ್ರಾ.ಪಂ. ಸದಸ್ಯ ಆದಂ ಕುಂಞ ಹಾಗೂ ಮಂತ್ರವಾದಿ ಉಮೇಶ್ ಶೆಟ್ಟಿ ಎಂಬವರು ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಕಳೆದ ಫೆ.19 ರಂದು ರಾತ್ರಿ 9.47ಕ್ಕೆ ಸಹಕಾರಿ ಸಂಘದ ಆವರಣ ಗೋಡೆಯ ಬಳಿ ಗಾಜಿನ ಬಾಟಲಿಯಲ್ಲಿ ವಾಮಚಾರ ಮಾಡಿ ಇರಿಸಿರುವ ವಿಡಿಯೋ ಸಹಕಾರಿ ಸಂಘದ ಸಿ.ಸಿ.ಕ್ಯಾಮರಾದಲ್ಲಿ ರೆಕಾರ್ಡ್ ಅಗಿತ್ತು. ಗಾಜಿನ ಬಾಟಲಿಯೊಂದು ಸ್ಥಳೀಯ ವ್ಯಕ್ತಿಯೋರ್ವರಿಗೆ ಕಾಣಲು ಸಿಕ್ಕಿದ ಬಳಿಕ ಸಿ.ಸಿ.ಕ್ಯಾಮಾರದಲ್ಲಿ ವಾಮಚಾರ ಮಾಡಿದ ಬಗ್ಗೆ ಮಾ.7ರಂದು ಇದು ಬೆಳಕಿಗೆ ಬಂದಿದೆ.

 

ಫೆ.23 ರಂದು ಈ ಸಹಕಾರಿ ಸಂಘದ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ವಿಜಯ ಸಾಧಿಸಿದ್ದರು.ಅದರೆ ಈ ಸಹಕಾರಿ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಲು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಆದಂ ಕುಂಜ್ಞಿ ಎಂಬವರು ಉಮೇಶ್ ಶೆಟ್ಟಿ ಎಂಬ ಮಂತ್ರವಾದಿ ಮೂಲಕ ವಾಮಚಾರ ಮಾಡಿರುವುದರ ಬಗ್ಗೆ ಮಂಗಳವಾರ ಸಂಘದಲ್ಲಿ ಕರೆದ ವಿಶೇಷ ಸಭೆಗೆ ಅಗಮಿಸಿ ತಪ್ಪಾಗಿದೆ ಎಂದು ಕ್ಷಮೆ ಕೇಳಿ ಜೊತೆಗೆ ತಪ್ಪಾಯಿತು ಎಂದು ಕ್ಷಮೆ ಕೋರಿದ ಮನವಿಯನ್ನಸಹಕಾರಿ ಸಂಘಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *