Header Ads
Header Ads
Header Ads
Breaking News

ಗೊಂದಲದ ಗೂಡದ ಸುಳ್ಯ ನಗರ ಪಂಚಾಯತ್ ಸಭೆ ನಗರ ಪಂಚಾಯತ್‌ಗೆ ಕಸಬಾದಲ್ಲಿ 6.10 ಎಕ್ರೆ ಜಾಗ ಮಂಜೂರು ಜಂಟಿ ಸರ್ವೆ ಬಳಿಕ ನಿರಪೇಕ್ಷಣಾ ಪತ್ರ ನೀಡಲು ಸಭೆಯಲ್ಲಿ ನಿರ್ಣಯ

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರು ನಗರ ಪಂಚಾಯತ್‌ಗೆ ಕಸಬಾ ಗ್ರಾಮದಲ್ಲಿ 6.10 ಎಕ್ರೆ ಮಂಜೂರು ಮಾಡಲು ನಿರಾಕ್ಷೇಪಣಾ ಪತ್ರ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಕಂದಾಯ ಇಲಾಖೆ, ನಗರ ಪಂಚಾಯತ್ ಹಾಗೂ ಸಂಬಂತರ ಸಮ್ಮುಖ ಜಂಟಿ ಸರ್ವೆ ನಡೆಸಿದ ಬಳಿಕವೇ ನಗರ ಪಂಚಾಯತ್‌ನಲ್ಲಿ ನಿರಕ್ಷೇಪಣಾ ಪತ್ರ ನೀಡಲು ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ.ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನಿರ್ಣಯಿಸಲಾಯಿತು. ಆಡಳಿತ ಪಕ್ಷದ ಸದಸ್ಯ ಎನ್.ಎ. ರಾಮಚಂದ್ರ ಅವರು, ನ.ಪಂ. ಮುಖ್ಯಾಧಿಕಾರಿಗಳು, ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ನಿರಕ್ಷೇಪಣಾ ಪತ್ರ ನೀಡುವಂತೆ ತಿಳಿಸಿದಾಗ ವಿಪಕ್ಷ ಸದಸ್ಯ ಶಿವಕುಮಾರ್ ಆಕ್ಷೇಪಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ವೇದಿಕೆಯ ಬಳಿ ಬಂದ ನಗರ ಪಂಚಾಯತ್ ಅರೋಗ್ಯಾಧಿಕಾರಿ ರವಿಕೃಷ್ಣ ಅವರು ಸದಸ್ಯರೊಬ್ಬರು ಪೋನ್ ಮೂಲಕ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಂತಹ ವಿಷಯ ಮನಸ್ಸಿಗೆ ತುಂಬಾ ನೋವಾಗುತ್ತದೆ. ಎಲ್ಲಾರೂ ಹೇಳಿದ ಕೆಲಸಗಳನ್ನು ನಾನು ಮಾಡುತ್ತೇನೆ. ಆದರೂ ನಿಂದನೆಯ ಮಾತುಗಳನ್ನು ಕೇಳಬೇಕಾಗುತ್ತದೆ ಎಂದು ಅಳಲು ತೊಡಿಕೊಂಡರು.

ಸಭೆಯಲ್ಲಿ ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಉಪಾದ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ಇಂಜಿನಿಯರ್ ಶಿವಕುಮಾರ್ ಉಪಸ್ಥಿತರಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply