Header Ads
Header Ads
Breaking News

ಗೊಂದಲ ಎಬ್ಬಿಸುವ ನೈತಿಕತೆಯಿಲ್ಲದ ಬಿಜೆಪಿ, ಸಚಿವ ರಮಾನಾಥ ರೈ ನಿಲುವು ಸಮರ್ಥನೀಯ -ಸುಳ್ಯ ಕಾಂಗ್ರೆಸ್

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪರವಾಗಿ ಸುಳ್ಯ ಕಾಂಗ್ರೆಸ್ ಬ್ಯಾಟ್ ಮಾಡಿದೆ.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಮುಖಂಡ ಜಯಪ್ರಕಾಶ್ ರೈ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಹೇಳಿದ ವಿಚಾರವನ್ನು ಮುಂದಿಟ್ಟು ಬಿಜೆಪಿಯವರು ವೃಥಾ ಕಾರಣ ಗೊಂದಲ ಎಬ್ಬಿಸುತ್ತಿದ್ದಾರೆ. ಇದಕ್ಕೆ ಅವರಿಗೆ ನೈತಿಕವಾಗಿಯೂ, ಕಾನೂನಾತ್ಮಕವಾಗಿಯೂ ಯಾವುದೇ ಅಧಿಕಾರವಿಲ್ಲ ಎಂದು ಸುಳ್ಯ ಕಾಂಗ್ರೆಸ್ ಹೇಳಿದೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಮಾನಾಥ ರೈಯವರು ಜಾತ್ಯಾತೀತ ನಿಲುವಿನ ಹಿರಿಯ ನಾಯಕ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಜಾಲ್ಸೂರು, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೋ, ಕಾಂಗ್ರೆಸ್ ನಾಯಕರಾದ ಎಸ್. ಸಂಶುದ್ದೀನ್, ಪಿ. ಎ. ಮಹಮ್ಮದ್, ಕಳಂಜ ವಿಶ್ವನಾಥ ರೈ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply