Header Ads
Header Ads
Breaking News

ಗೋಪಾಡಿ ಹೂವಿನಕೆರೆ ವಾದಿರಾಜ ಮಠದಲ್ಲಿ ಭಕ್ತಿಗೀತೆಗಳ ಸಿಡಿ ಬಿಡುಗಡೆ ವಾದಿರಾಜ ಮಠಾಧೀಶರಾದ ವಿಶ್ವವಲ್ಲಭ ತೀರ್ಥರು ಸಿಡಿ ಲೋಕಾರ್ಪಣೆ

ವಾದಿರಾಜರ ಧೃಢ ಋಜುಗಳೆಂದ್ಹೊಡಿ’ ಎನ್ನುವ ಭಕ್ತಿಗೀತೆಗಳ ಸಿಡಿ ಬಿಡುಗಡೆ ಕಾರ್ಯಕ್ರಮ ಜ.29 ರಂದು ಗೋಪಾಡಿಯಲ್ಲಿರುವ ಹೂವಿನಕೆರೆಯ ಶ್ರೀ ವಾದಿರಾಜ ಮಠದಲ್ಲಿ ನಡೆಯಿತು. ಜನವರಿ 29 ರಂದು ನಡೆಯುತ್ತಿರುವ ಭಾವಿ ಸಮೀರ ಶ್ರೀ ವಾದಿರಾಜರ ಜಯಂತಿ ಉತ್ಸವದಲ್ಲಿ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರು ಸಿಡಿಯನ್ನು ಲೋಕಾರ್ಪಣೆಗೊಳಿಸಿ, ವಾದಿರಾಜರ ಮದ್ವರ ತತ್ವಗಳನ್ನು ವಿಶ್ವದಾದ್ಯಂತ ಪಸರಿಸಿ, ವೈಷ್ಣವ ದೀಕ್ಷೆಯನ್ನು ನೀಡಿ, ನೂರಾರು ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಸಾವಿರಾರು ಕನ್ನಡ ಪದ್ಯಗಳನ್ನು ವಾದಿರಾಜರು ರಚಿಸಿದ್ದಾರೆ.

ವೀರಪುರಾಣ ಸಾರವನ್ನು ಸರಳವಾಗಿ ಜನರಿಗೆ ಅವರು ತಿಳಿಯ ಪಡಿಸಿದ್ದಾರೆ. ಅಂಥಹ ವಾದಿರಾಜರ ಪುಣ್ಯಕಾಲದಲ್ಲಿ ವಾದಿರಾಜರ ಕೀರ್ತನೆಗಳು ಹಾಗೂ ಅವರ ಮೇಲಿನ ಪದ್ಯಗಳನ್ನು ಪುರೋಹಿತರಾದ ಮಾಧವ ವರ್ಣರ ಪುತ್ರ ರವೀಂದ್ರ ವರ್ಣರು ಸಿಡಿ ರೂಪದಲ್ಲಿ ಹೊರತರುತ್ತಿರುವುದು ಒಳ್ಳೆಯ ಕೆಲಸ ಎಂದರು.

ಭಕ್ತಿಗೀತೆಗಳ ಸಿಡಿ ಬಿಡುಗಡೆ ಸಮಾರಂಭದಲ್ಲಿ ಶ್ರೀಮತಿ ಲಕ್ಷ್ಮೀವರ್ಣ, ರಾಧಾಕೃಷ್ಣ ವರ್ಣ, ರಾಘವೇಂದ್ರ ವರ್ಣ, ರವೀಂದ್ರ ವರ್ಣ, ರಾಮಕೃಷ್ಣ ವರ್ಣ ಹಾಗೂ ಕೋಟೇಶ್ವರ ಮಾಗಣಿಯ ಸಮಸ್ತ ಭಕ್ತ ವೃಂದದವರು ಉಪಸ್ಥಿತರಿದ್ದರು.

Related posts

Leave a Reply