Header Ads
Header Ads
Breaking News

ಗೋರಿಗುಡ್ಡೆಯ ಕಿಟೆಲ್ ಮೆಮೋರಿಯಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆಯು ಗುರುವಾರ ನಡೆಯಿತು.

ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಡನೆಯನ್ನು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೆರೆವೇರಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಡವರಾದರೂ ಮನಸ್ಥಿತಿಯಲ್ಲಿ ಕುಗ್ಗದೆ, ಯಶಸ್ಸಿನ ಹಾದಿಯಲ್ಲಿ ಬೆಳೆಯಬೇಕಿದೆ. ಬಡತನವನ್ನು ಮೆಟ್ಟಿ ನಿಲ್ಲುವಂತೆ ಪ್ರೋತ್ಸಾಹಿಸುತ್ತಿರುವ ಸಂಸ್ಥೆಯು ಸರಕಾರದ ಕಲ್ಪನೆಗಿಂತ ಮೊದಲೇ ಬಿಸಿಯೂಟವನ್ನು ಆರಂಭಿಸಿರುವುದು ಶ್ಲಾಘನೀಯ. ಮುಚ್ಚುತ್ತಿರುವ ಕನ್ನಡ ಶಾಲೆಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯನ್ನು ಇಟ್ಟುಕೊಂಡು ಸಂಸ್ಥೆ ಬೆಳೆಯುತ್ತಿದೆ. ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ಮನುಷ್ಯತ್ವವನ್ನು ಬೆಳೆಸಿಕೊಂಡು ಪದವಿಯನ್ನು ಪಡೆದುಕೊಂಡು ಸಮಾಜಕ್ಕೆ ಮಾದರಿಯಾಗಿ ಬೆಳೆಯಿರಿ ಎಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ. ನಾಗರಾಜಪ್ಪ ವಹಿಸಿದ್ದರು

. ಮುಖ್ಯ ಅತಿಥಿಗಳಾಗಿ ಎಕ್ಕೂರು ಫಿಶರೀಸ್ ಕಾಲೇಜಿನ ಪ್ರೊ. ಶಿವಕುಮಾರ್ ಮಗದ, ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್ ಆಗಮಿಸಿದ್ದರು.ಇನ್ನು ಬಡತನದಲ್ಲಿಯೇ ಕಲಿತು ಶಿಕ್ಷಣ ಪೂರೈಸಿ ಸದ್ಯ ಚಾರ್ಟಡ್ ಅಕೌಂಟೆಂಟ್ ಆಗಿರುವ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಲಾವಣ್ಯ ಹಾಗೂ ಶಶಿಧರ್ ಕಜೆಕಾರ್ ಬದುಕಿನ ಯಶಸ್ಸಿನ ಹಾದಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.ಈ ಸಂಧರ್ಭ ಸರಕಾರದಿಂದ ನಿಯುಕ್ತಿಗೊಂಡು ಒಂದು ವರ್ಷ ಸೇವೆ ಸಲ್ಲಿಸಿ ವಾಪಸ್ಸಾಗುತ್ತಿರುವ ಶಿಕ್ಷಕಿಂiiರಾದ ಎಡ್ಲಿನ್ ಮತ್ತು ಲಿಡ್ವಿನ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಗೋರಿಗುಡ್ಡೆಯ ಕಿಟೆಲ್ ಮೆಮೋರಿಯಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡಯಾನ ಜ್ಯೋತಿ ಫ್ರ್ಯಾಂಕ್, ಗೋರಿಗುಡ್ಡೆ ಕಿಟೆಲ್ ಮೆಮೋರಿಯಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಠಲ್ ಅಬೂರ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಚರಣ್ ಜಿ. ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply