Header Ads
Header Ads
Header Ads
Breaking News

ಗೋಳ್ತಮಜಲಿನ ಮಿಥುನ್ ವಿರುದ್ಧ ಸುಳ್ಳು ಕೇಸ್ ಮಿಥುನ್ ವಿರುದ್ಧದ ಪ್ರಕರಣ ಕೈಬಿಡಲು ಆಗ್ರಹ ಸುದ್ದಿಗೋಷ್ಠಿಯಲ್ಲಿ ಮಿಥುನ ಪೋಷಕರು ಒತ್ತಾಯ

ಬಂಟ್ವಾಳ: ಗೋಳ್ತಮಜಲು ಗ್ರಾಮದ ಹೊಸಮನೆ ನಿವಾಸಿ ಮಿಥುನ್ ವಿರುದ್ದ ಸುಳ್ಳು ಕೇಸು ದಾಖಲಿಸಿ ಪೊಲೀಸರು ವಿನಃಕಾರಣ ತೊಂದರೆ ನೀಡುತ್ತಿದ್ದಾರೆ. ಮಿಥುನ್‌ಗೆ ಯಾವುದೇ ತೊಂದರೆ ಆದರೂ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಪೊಲೀಸರೇ ನೇರ ಕಾರಣ ಎಂದು ಮಿಥುನ್ ಪೋಷಕರು ಆರೋಪಿಸಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಮಿಥುನ್ ತಂದೆ ನಾರಾಯಣ ಪೂಜಾರಿ ಹಾಗೂ ತಾಯಿ ಲಲಿತಾ ಸುದ್ದಿಗೋಷ್ಟಿ ನಡೆಸಿ ಪೊಲೀಸರ ನಡವಳಿಕೆಯ ವಿರುದ್ದ ಕಣ್ಣೀರು ಹಾಕಿದರು. ಮಿಥುನ್ ಯಾವುದೇ ಗಲಭೆಗಳಲ್ಲಿ ಪಾಲ್ಗೊಳ್ಳದೆ ಇದ್ದರೂ ಆತನ ವಿರುದ್ದದ ಪ್ರಕರಣಗಳಿಂದಾಗಿ ಹಲವು ಬಾರಿ ಬಂಧನವಾಗಿದೆ. ಅವನ ಮೇಲಿನ ಪ್ರಕರಣಗಳು ಉಚ್ಛನ್ಯಾಯಲಾಯದಲ್ಲಿ ರದ್ದಾಧ ಬಳಿಕ ಪೊಲೀಸರು ರಾಜಕೀಯ ಪ್ರಭಾವಕ್ಕೊಳಗಾಗಿ ಹೆಚ್ಚಿನ ತೊಂದರೆ ನೀಡುತ್ತಿದ್ದಾರೆ, ಎನ್‌ಕೌಂಟರ್ ಮಾಡುವುದಾಗಿ ಬೆದರಿಸಿರಿವುದಾಗಿ ಅವರು ತಿಳಿಸಿದರು.
ಮಗನಿಗೆ ತೀವ್ರ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆಯನ್ನು ಒದಗಿಸಿ ಆತನ ವಿರುದ್ದದ ಸುಳ್ಳು ಪ್ರಕರಣಗಳನ್ನು ಕೈ ಬಿಡಬೇಕೆಂದು ಗೃಹ ಸಚಿವರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.
ಸಹೋದರ ಪವನ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply