Header Ads
Breaking News

ಗೋವಿಂದದಾಸ್ ಕಾಲೇಜಿನಲ್ಲಿ ತಂಬಾಕು ನಿಯಂತ್ರಣದ ಬಗ್ಗೆ ಕಾರ್ಯಾಗಾರ

ಸುರತ್ಕಲ್‍ನ ಗೋವಿಂದದಾಸ್ ಕಾಲೇಜಿನಲ್ಲಿ ತಂಬಾಕು ನಿಯಂತ್ರಣದ ತಂಬಾಕು ಮುಕ್ತ ಯುವ ಅಭಿಯಾನ ದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಮಂಗಳೂರಿನ ಎಜೆ ಇನ್ಸಿಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‍ನ ಅಂಕೋಲಾಜಿಸ್ಟ್ ಡಾ. ವೆಂಕಟ್ರಮಣ ಕಿಣಿ ಅವರು ಉದ್ಘಾಟಿಸಿದರು. ಬಳಿಕ ತಂಬಾಕಿನಿಂದ ಆಗುವ ದುಷ್ಪಾರಿಣಾಮದ ಬಗ್ಗೆ ತಿಳಿ ಹೇಳಿದರು.

ಆನಂತರ ಬೆಂಗಳೂರು ಪಿಯು ಕಾಲೇಜಿನ ಎನ್‍ಎಸ್‍ಎಸ್ ಘಟಕದ ರಾಜ್ಯ ಸಹ ಸಂಯೋಜಕ ಡಾ. ಗುಬ್ಬಿಗೂಡು ರಮೇಶ್ ಸಿ.ಜಿ. ಅವರು ಪ್ರತಿಜ್ಞಾವಿಧಿ ಭೋಧಿಸಿದರು.
ಈ ಸಂದರ್ಭ ಮಂಗಳೂರು ಪಿಯು ಬೋರ್ಡ್‍ನ ಉಪನಿರ್ದೇಶಕರಾದ ವಿಷ್ಣುಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಸುರತ್ಕಲ್ ಹೆಚ್.ವಿ ಸಂಘದ ಕಾರ್ಯದರ್ಶಿ ಎಮ್. ವೆಂಕಟರಾವ್, ಗಾಯತ್ರಿ ರೆಡ್ಡಿ, ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಪ್ರಿನ್ಸಿಪಾಲ್ ಲಕ್ಷ್ಮೀ ಪಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *