Header Ads
Header Ads
Breaking News

ಗೋವಿಂದನ ಸನ್ನಿದಾನಕ್ಕೆ ಕೋವಿಂದ:ಪೇಜಾವರ ಶ್ರೀಗಳಿಂದ ಯಕ್ಷಗಾನ ಕಿರೀಟ, ಕೃಷ್ಣನ ಮೂರ್ತಿ ಉಡುಗೊರೆ.

ಜಗತ್ ಪ್ರಸಿದ್ಧಿಯಾಗಿರುವ ಉಡುಪಿಯ ಗೋವಿಂದನ ಕ್ಷೇತ್ರಕ್ಕೆ ಇಂದು ದೇಶದ ಪ್ರಥಮ ಪ್ರಜೆ ಕೋವಿಂದ ಚಿತ್ತೈಸಿದ್ದಾರೆ. ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿ 80ವರ್ಷ ಪೂರೈಸಿದ ಹಿನ್ನಲೆಯಲ್ಲಿ ದೇವಾಲಯಗಳ ಬೀಡು ಉಡುಪಿಗೆ ಆಗಮಿಸಿದ ರಾಷ್ಟ್ರಪತಿಗಳು ಪೇಜಾವರ ಶ್ರೀಗಳ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.. ಇದರ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ ಕೋವಿಂದ ಇಂದು ದೇವಾಲಯಗಳ ಬೀಡು, ಕೃಷ್ಣನ ನಗರಿ ಉಡುಪಿಗೆ ಆಗಮಿಸಿ ಕೃಷ್ಣದರ್ಶನಗೈದಿದ್ದಾರೆ. ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿ ೮೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಷ್ಟ್ರಪತಿಗಳು ಉಡುಪಿಗೆ ಆಗಮಿಸಿದರು.ಉಡುಪಿಯಲ್ಲಿರುವ ಆದಿಉಡುಪಿ ಹೆಲಿಪ್ಯಾಡ್ ಗೆ ಹೆಲಿಕ್ಯಾಪ್ಟರ್ ಮೂಲಕ ಬಂದಿಳಿದ ರಾಷ್ಟ್ರಪತಿಗಳನ್ನು ಕರ್ನಾಟಕದ ರಾಜ್ಯಪಾಲ ವಜೂಭಾಯ್ ವಾಲಾ, ನಾಗಲ್ಯಾಂಡ್ ರಾಜ್ಯಪಾಲ ಪಿ.ವಿ ಆಚಾರ್ಯ, ಸಚಿವೆ ಜಯಮಾಲಾ, ಪೊಲೀಸ್ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಪೇಜಾವರ ಮಠಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಿ ಪೇಜಾವರ ಶ್ರೀಗಳನ್ನು ಅಭಿನಂದಿಸಿದರು. ಇದೇ ಸಂದರ್ಬದಲ್ಲಿ ಪೇಜಾವರ ಮಠದ ವತಿಯಿಂದ ರಾಷ್ಟ್ರಪತಿಗಳಿಗೆ ಶಾಲು ಹೊದಿಸಿ, ಯಕ್ಷಗಾನ ಕಿರೀಟ ತೊಡಿಸಿ , ಕೃಷ್ಣನ ಮೂರ್ತಿ ಉಡುಗೊರೆಯಾಗಿ ಪೇಜಾವರ ಶ್ರೀಗಳು ನೀಡಿದರು. ಶ್ರೀರಾಮ ದೇಶದ ಮರ್ಯಾದಾ ಪುರುಷೋತ್ತಮ.ರಾಮನ ಜೀವನ ಆದರ್ಶ ನಮಗೆಲ್ಲ ಮಾದರಿ.ರಾಮ ರಾಜ್ಯವೇ ಆದರ್ಶ ರಾಜ್ಯ.ಪ್ರಜೆಗಳು ,ಪತ್ನಿ, ಸಹೋದರ ನ ಜೊತೆ ರಾಮ ಆದರ್ಶ ಬದುಕಿದ್ದ.ರಾಮನ ಆದರ್ಶ ಪಾಲಿಸಿದ್ರೆ ದೇಶ ಸುಖಿಯಾಗಿರುತ್ತದೆ.ವಿಶ್ವಕ್ಕೂ ರಾಮನ ಆದರ್ಶ ಮಾದರಿಯಾಗಬೇಕು.ಬೇಧ ಭಾವ ಬಿಟ್ಟು ಎಲ್ಲರೂ ಸಹಬಾಳ್ವೆಯಿಂದ ಬದುಕೋಣ.ದೇಶದಲ್ಲಿ ಸಹನೆ, ಕರುಣೆಯ ಬಾಳ್ವೆಗಾಗಿ ಕೃಷ್ಣನಲ್ಲಿ ಪ್ರಾರ್ಥಿಸಿದ್ದೇನೆ ಅಂತ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿಕೆ ನೀಡಿದರು.ಪೇಜಾವರ ಮಠದ ಬಳಿಕ ರಾಷ್ಟ್ರಪತಿಗಳು ಕೃಷ್ಣಮಠಕ್ಕೆ ತೆರಳಿ ಕೃಷ್ಣದರ್ಶನ ಪಡೆದರು. ಪರ್ಯಾಯ ಪಲಿಮಾರು ವಿದ್ಯಾಧೀಶತೀರ್ಥ ಶ್ರೀಗಳು ಶಾಲು ಹೊದಿಸಿ, ಕೃಷ್ಣನ ಮೂರ್ತಿ ನೀಡಿ ಗೌರವಿಸಿದರು.ಕೃಷ್ಣ ಮಠದ ಚಂದ್ರ ಶಾಲೆಯಲ್ಲಿ ಅಷ್ಟ ಮಠಾದೀಶರೊಡಗೂಡಿ ರಾಷ್ಟ್ರಪತಿಗಳು ಸಭೆಯನ್ನ ನಡೆಸಿದರು. ಪೇಜಾವರ, ಪಲಿಮಾರು, ಕಾಣಿಯೂರು ಶ್ರೀಗಳು ಉಪಸ್ಥಿತರಿದ್ದರು. ಉಡುಪಿಗೆ ಭೇಟಿ ನೀಡಿದ ರಾಷ್ಟ್ರಪತಿಗಳಿಗೆ ಪೇಜಾವರ ಶ್ರೀಗಳು ಪಾಜಕದಲ್ಲಿ ಮಧ್ವ ಯುನಿವರ್ಸಿಟಿ ಸ್ಥಾಪನೆಗೆ ಸಹಕಾರ ಮತ್ತುಮಧ್ವ ದಿನಾಚರಣೆ ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ.ರಾಮಂದಿರ ನಿರ್ಮಾಣದ ಬಗ್ಗೆ ರಾಷ್ಟ್ರಪತಿಗಳಿಗೆ ನಮ್ಮ ಅಪೇಕ್ಷೆ ಏನು ಅನ್ನುವುದನ್ನು ಪೇಜಾವರ ಶ್ರೀಗಳು ತಿಳಿಸಿದರು. ರಾಷ್ಟ್ರಪತಿಗಳು ಅವರು ನಗುವಿನ ಮೂಲಕ ಉತ್ತರ ನೀಡಿದ್ದಾರೆ ಅಂತ ಇದೇ ಸಂದರ್ಬದಲ್ಲಿ ಪೇಜಾವರ ಶ್ರೀಗಳು ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ರಾಷ್ಟ್ರಪತಿ ಭೇಟಿಯ ಹಿನ್ನಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹೆಲಿಪ್ಯಾಡ್ ಹಾಗೂ ಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲಿತ್ತು. ೨ಗಂಟೆಗಳ ಕಾಲ ಉಡುಪಿಯೇ ಸ್ಥಬ್ದವಾಗಿತ್ತು. ಜೀರೋ ಟ್ರಾಫಿಕ್ ನಿರ್ಮಾಣ ಮಾಡಲಾಗಿತ್ತು.ರಥಬೀದಿಯ ಸುತ್ತ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಸುಮಾರು 1ಗಂಟೆಗಳ ಕಾಲ ಉಡುಪಿಯಲ್ಲಿ ಇದ್ದ ರಾಷ್ಟ್ರಪತಿಗಳನ್ನು ಅಪೂರ್ವ ಕಾರ್ರ್ಯಕ್ರಮದಲ್ಲಿ ಭಾಗಿಯಾಗಿದರು.

Related posts

Leave a Reply