Header Ads
Header Ads
Breaking News

ಗೋವುಗಳು ಹೆಚ್ಚಿನ ಜನರ ಬದುಕಿನ ಭಾಗವಾಗಿದೆ : ಅಭಯಚಂದ್ರ ಜೈನ್

ಗೋವುಗಳು ಹೆಚ್ಚಿನ ಜನರ ಬದುಕಿನ ಭಾಗವಾಗಿದೆ ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್ ಹೇಳಿದರು.ಅವರು ಮುಲ್ಕಿ ಬ್ಲಾಕ್ ಕಾಂಗ್ರೇಸ್ ಹಾಗೂ ಮಹಿಳಾ ಘಟಕದ ವತಿಯಿಂದ ಪಟ್ಟೆ ಜಾರಂದಾಯ ಭಂಡಾರ ಸಾನದಲ್ಲಿ ಮಂಗಳವಾರ ನಡೆದ ಗೋವು ಪೂಜೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಿಂದು ಸಂಪ್ರದಾಯದಂತೆ ಗೋವಿಗಳಿಗೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಂಡಾರ ಮನೆ ಉಜ್ಜು ಪೂಜಾರಿ ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ದ.ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply