Header Ads
Header Ads
Breaking News

ಗೋಹತ್ಯೆ ನಿಷೇಧಿಸಿ ವಿಹೆಚ್‌ಪಿ ಬಜರಂಗದಳದಿಂದ ಪ್ರತಿಭಟನೆ

 ಮಂಗಳೂರಿನ ಕುದ್ರೋಳಿಯಲ್ಲಿ ಕಾರ್ಯಾರಿಸುತ್ತಿರುವ ಕಸಾಯಿಖಾನೆಯಲ್ಲಿ ಶೀಘ್ರವೇ ಗೋಹತ್ಯೆ ನಿಷೇಧಿಸಬೇಕೆಂದು ಆಗ್ರಹಿಸಿ ವಿಎಚ್‌ಪಿ ಬಜರಂಗದಳ ಮಂಗಳೂರಿನ ಪುರಭವನದ ಗಾಂಧಿ ಪ್ರತಿಮೆ ಮುಂಭಾಗ ಧರಣಿ ನಡೆಸಿದ್ರು.ಇತ್ತೀಚೆಗೆ ಮಾಹಿತಿ ಹಕ್ಕಿನಲ್ಲಿ ಪಡೆದ ವರದಿ ಪ್ರಕಾರ ಪ್ರತಿ ತಿಂಗಳು ನೂರಾರು ಜಾನುವಾರುಗಳ ಹತ್ಯೆ ನಡೆಯುತ್ತಿದೆ ಎನ್ನುವುದನ್ನು ಮಹಾನಗರ ಪಾಲಿಕೆ ಅಧಿಕಾರಿಗಳೇ ವರದಿ ನೀಡಿದ್ದಾರೆ.

ಇದರ ವಿರುದ್ಧ ಬಜರಂಗದಳ ಈಗಾಗಲೇ ಪೊಲೀಸ್ ಆಯುಕ್ತರಿಗೆಹಾಗೂ ಸ್ಥಳೀಯ ಠಾಣೆಯಲ್ಲಿ ದೂರನ್ನು ನೀಡಿದೆ. ಆದರೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದೆ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದರು. ಅಲ್ಲದೇ ತಕ್ಷಣ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆಯಲು ಕಾರಣೀಕರ್ತರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಇನ್ನು ಧರಣಿ ಮಧ್ಯೆ ಭಜನೆ ಮಾಡುವ ಮೂಲಕ ಪ್ರತಿಭಟನಾಕಾರರು ಗಮನಸೆಳೆದರು. ಸ್ಥಳದಲ್ಲಿ ನಗರ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.

Related posts

Leave a Reply