Header Ads
Breaking News

ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಹಿನ್ನೆಲೆ : ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಗೋಪೂಜೆ

ರಾಜ್ಯದಲ್ಲಿ ಗೋಹತ್ಯೆ ನಿಷೇಧಕ್ಕೆ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ವತಿಯಿಂದ ಗೋಪೂಜೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆ ಗೆ ವಿಶೇಷ ಸ್ಥಾನವಿದೆ. ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧದ ಮಸೂದೆ ಮಂಡನೆ ಮಾಡಿದ್ದಾರೆ. ಇದಕ್ಕಾಗಿ ಯಡಿಯೂರಪ್ಪ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 

ದೇಶದಲ್ಲಿ ಗೋ ಸಂಸ್ಕೃತಿ ಉಳಿಯೋದಕ್ಕೆ ಈ ಮಸೂದೆ ಬಂದಿದೆ. ಕಾಂಗ್ರೆಸ್ ಈ ಹಿಂದೆ ಮಸೂದೆ ತೆಗೆಯುವಾಗ ಚರ್ಚೆ ಮಾಡಿತ್ತಾ? ಈಗ ಚರ್ಚೆ ಬೇಕು ಅನ್ನೋದು ಕಾಂಗ್ರೆಸ್‍ನ ತುಷ್ಠೀಕರಣ ನೀತಿ ಎಂದ ಅವರು, ಸಿದ್ಧರಾಮಯ್ಯ ಸೆಗಣಿ ಎತ್ತಿದ್ದೇನೆ ಅಂತಾ ಹೇಳ್ತಾರೆ. ಸೆಗಣಿ ಎತ್ತಿದ್ದರಿಂದ ಏನೂ ಆಗೋದಿಲ್ಲ. ಗೋವನ್ನು ಆರಾಧನೆ ಮಾಡಬೇಕು. ಸೆಗಣಿ ಎತ್ತಿ ನಾಟಕ ಮಾಡೋದ್ರಿಂದ ಪ್ರಯೋಜನ ಇಲ್ಲ. ಕಾಂಗ್ರೆಸ್ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಗೋ ಹತ್ಯೆ ನಿಷೇಧ ರೈತರಿಗೆ ಪೂರಕವಾದ ಅಂಶವೇ ಆಗಿದೆ. ಕಾಂಗ್ರೆಸ್ ಸುಮ್ಮನೆ ತುಷ್ಟೀಕರಣ ಮಾಡುತ್ತಿದೆ ಎಂದು ಹೇಳಿದರು.ಈ ಸಂದರ್ಭ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ್, ಪ್ರೇಮಾನಂದ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರು ಹಾಜರಿದ್ದರು.

Related posts

Leave a Reply

Your email address will not be published. Required fields are marked *