Header Ads
Header Ads
Breaking News

ಗೋ ಗ್ರೀನ್ ಅಭಿಯಾನದ ಅಡಿ ಸೈಕಲ್ ವಿತರಣೆ. ಸಹಕಾರಿ ಕ್ಷೇತ್ರದಲ್ಲಿ ಇದೇ ಮೊದಲು. ಬಡಗಬೆಟ್ಟು ಬ್ಯಾಂಕ್ ಸಿಬ್ಬಂದಿ ಇನ್ನು ಸೈಕಲ್‌ನಲ್ಲೇ ಆಫೀಸ್ ಗೆ…!

ಸಹಕಾರಿ ಕ್ಷೇತ್ರದಲ್ಲಿ ಇದೇ ಮೊದಲು ಎಂಬಂತೆ ಬ್ಯಾಂಕ್‌ನ ಸಿಬ್ಬಂದಿಗಳು ಸೈಕಲ್ ತುಳಿದುಕೊಂಡೇ ಬ್ಯಾಂಕ್‌ನ ಕರ್ತವ್ಯಕ್ಕೆ ಹಾಜಾರಾಗಲಿದ್ದಾರೆ. ಇಂತಹದೊಂದು ಕ್ರಾಂತಿಕಾರಿಯ ಹೆಜ್ಜೆಯನ್ನು ಬಡಗಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಇಟ್ಟಿದೆ.ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿ ತನ್ನ 100ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಹಿನ್ನಲೆಯಲ್ಲಿ ಬ್ಯಾಂಕ್ 100 ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದು ಈಗಾಗಲೇ60 ಸಮಾಜಮುಖಿ ಕಾರ್ಯಕ್ರಮವನ್ನು ಮುಗಿಸಿ ದಾಪುಗಾಲು ಇಟ್ಟಿದೆ. ಇದೀಗ ಹೊಸತೊಂದು ಕ್ರಾಂತಿಕಾರಿ ಹೆಜ್ಜೆಯನ್ನೂ ಇಟ್ಟಿದೆ.


ಸಾಂಕೇತಿಕವಾಗಿ ಇಂದು ಸುಮಾರು60ಸೈಕಲ್ ಗಳನ್ನು ಸಿಬ್ಬಂದಿಯವರಿಗೆ ವಿತರಿಸಲಾಯಿತು.ಸರಳ ಸಮಾರಂಭದಲ್ಲಿ ಭಾಗವಹಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಮಾತನಾಡಿ ಆರೋಗ್ಯದ ದೃಷ್ಟಿಯಿಂದ ಹಾಗೂ ತೈಲ ಉತ್ಪನ್ನವನ್ನು ಉಳಿಸುವ ವಿನೂತನ ಯೋಜನೆ, ಯೋಚನೆ ನಿಜಕ್ಕೂ ಶ್ಲಾಘನೀಯ. ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮವನ್ನು ಬ್ಯಾಂಕ್ ಹಮ್ಮಿಕೊಳ್ಳಲಿ ಅಂತ ಶುಭ ಹಾರಿಸಿದರು.ಬ್ಯಾಂಕ್ ನ ಧ್ಯೇಯ, ಉದ್ದೇಶ ಹಾಗೂ ಶತಮಾನೋತ್ಸವದ ಬಗ್ಗೆ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾಹಿತಿ ನಿಡಿದರು.ಬ್ಯಾಂಕ್ ನ ನಿರ್ದೆಶಕ ಪುರುಷೋತ್ತಮ್ ಶೆಟ್ಟಿ, ಐಕಳ ಬಾವ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply