
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕಾದ ಕಾರ್ಯ. ಅನೇಕ ಸಬೂಬುಗಳನ್ನು ಮುಂದಿಟ್ಟುಕೊಂಡು ತೀರ್ಮಾನಕ್ಕೆ ತಡೆ ಹಿಡಿದಿದ್ದಾರೆ. ಆದರೆ ಹಾಗಾಗಬಾರದು, ಗೋವುಗಳು ಭರತ ಭೂಮಿಯಲ್ಲಿ ಪೂಜನೀಯ. ಹೀಗಾಗಿ ಅವುಗಳ ಉಳಿವಿಕೆಗೆ ಸರ್ಕಾರ ಬಲವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಮಂಗಳೂರಿನಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.ಅವರು ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಅಗಮಿಸಿದ್ದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು. ಪತ್ರಿಕೆಗಳಲ್ಲಿ ಲವ್ ಜಿಹಾದ್ ಸಂಬಂಧ ಮಹಿಳೆಯರೇ ಹುಷಾರ್ ಎಂಬ ಎಚ್ಚರಿಕೆ ನೀಡಲಾಗಿದೆ. ಇವತ್ತು ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ವಂಚನೆಗೆ ಒಳಗಾಗ್ತಿದಾರೆ. ದೈಹಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಗಾಗ್ತಿದಾರೆ. ಸರ್ಕಾರ ಇದರ ಕುರಿತಾಗಿ ಅನೇಕ ರಾಜ್ಯಗಳ ಕಾನೂನಿನಂತೆ ತಡೆಯುವ ಕೆಲಸ ಮಾಡಬೇಕು. ಅದಕ್ಕೆ ಬೇಕಾಗಿರುವ ಬಲವಾದ ಕಾನೂನು ರಚನೆಗೆ ಆಗ್ರಹಿಸುತ್ತೇವೆ ಎಂದು ಹೇಳಿದರು.