Header Ads
Header Ads
Header Ads
Breaking News

ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಎಡರಂಗದಿಂದ ಪ್ರತಿಭಟನಾ ಧರಣಿ

ಮಂಜೇಶ್ವರ: ಹಿರಿಯ ಪತ್ರಕರ್ತೆ, ಸಾಹಿತಿ, ಹೋರಾಟಗಾರ್ತಿ ಗೌರಿ ಲಂಕೇಶ್ ರವರ ಕೊಲೆ ಕೃತ್ಯವನ್ನು ಖಂಡಿಸಿ ಹಾಗೂ ಕೊಲೆಗೈದ ನೈಜ ಅರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಪ್ರಧಾನ ಅಂಚೆ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು.

ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿಯಲ್ಲಿ ಹಲವಾರು ಮಂದಿ ಪಾಲ್ಗೊಂಡರು.

ಧರಣಿಯನ್ನು ಸಿಪಿ‌ಐ ಎಂ ಜಿಲ್ಲಾ ಕಾರ್ಯದರ್ಶಿ ಕೆ ಪಿ ಸರೀಶ್ಚಂದ್ರನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ಜಹೀರಾತು ಇಲ್ಲದೆ ಸ್ವಂತ ಖರ್ಚಿನಿಂದ ಪತ್ರಿಕೆಯನ್ನು ಪ್ರಕಟಿಸುತಿದ್ದ ಗೌರಿ ಲಂಕೇಶ್ ಫಾಸಿಸ್ಟ್ ಶಕ್ತಿಗಳ ವಿರುದ್ದ ತನ್ನ ಹರಿತವಾದ ಲೇಖನಿಯಲ್ಲಿ ಧ್ವನಿ ಎತ್ತಿರುದೇ ಅವರ್ ಕೊಲೆಗೆ ಕಾರಣವೆಂಬುದು ಮೇಲಿನಿಂದ ವ್ಯಕ್ತವಾಗುತಿದ್ದರೂ, ನೈಜ ಆರೋಪಿ ಎಲ್ಲೆ ಅಡಗಿದ್ದರೂ ಹಂತಕನನ್ನು ಕಾನೂನಿನ ಎದುರಿಗೆ ತರಲೇ ಬೇಕಾಗಿದೆ. ಫಾಸಿಸ್ಟ್ ಗಳ ವಿರುದ್ದ ಧ್ವನಿ ಎತ್ತುವ ವರದಿಗಾರರಿಗೂ ಹಲ್ಲೆಯಾಗುವುದು ವಿಷಾದನೀಯ. ಸರಕಾರ ಇದರ ವಿರುದ್ದ ಕ್ರಮ ಕೈಗೊಳ್ಳ ಬೇಕಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭ ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ವೆಳ್ಳಕಾಪಿಲ್, ಸಿ ಎಚ್ ಕುಂಞಂಬು, ಅಝೀಝ್ ಕಡಪ್ಪುರ ಮೊದಲಾದವರು ಮಾತನಾಡಿದರು

Related posts

Leave a Reply