Header Ads
Header Ads
Header Ads
Breaking News

ಗೌರಿ ಲಂಕೇಶ್ ಹತ್ಯೆ ಪ್ರಕರಣ:ಕುಂಕುಮ ಪ್ರದರ್ಶನದ ಹಿಂದೆ ರಾಜಕೀಯವಿದೆ:ಗೋಪಾಲ್ ಜಿ

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಕುಮಧಾರಿ ಶಂಕಿತನ ರೇಖಾ ಚಿತ್ರ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರೀಯಿಸಿರುವ ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ ಕುಂಕುಮ ಪ್ರದರ್ಶನದ ಹಿಂದೆ ರಾಜಕೀಯ ಇರಬಹುದು ಎಂದಿದ್ದಾರೆ.

ಗೌರಿ ಹತ್ಯೆ ವಿಚಾರ ದು:ಖ ತಂದಿದೆ. ಕಾಂಗ್ರೆಸ್ ಸರಕಾರ ಬಂದಾಗಿನಿಂದ ಸಂಘ ಪರಿವಾರ ಟಾರ್ಗೆಟ್ ಆಗ್ತಿದೆ. ಕಲ್ಬುರ್ಗಿ ಹತ್ಯೆ ನಡೆದಾಗಲೂ ಸಂಘಪರಿವಾರ ಟಾರ್ಗೆಟ್ ಆಗಿತ್ತು.ಆದರೆ ಇದುವರೆಗೂ ಅದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಲೇ ಇವೆ. ಸಿದ್ದರಾಮಯ್ಯ ಭಜರಂಗಳದಳದ ನಾಶದ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ. ಗೌರಿ ಹತ್ಯೆ ಪ್ರಕರಣ ಸರಿಯಾದ ದಿಕ್ಕಿನಲ್ಲಿ ತನಿಖೆ ಆಗಲಿ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಲಿ ಎಂದರು. ಇನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮೌಡ್ಯ ಪ್ರತಿಬಂಧಕ ವಿಧೇಯಕ ಜಾರಿ ವಿಚಾರದಲ್ಲಿ ಮಾತನಾಡಿದ ಗೊಪಾಲ್ ಜೀ ಹಿಂದೂ ಧರ್ಮದಲ್ಲಿ ಮೌಡ್ಯವಿಲ್ಲ. ಆದ್ರೆ ನಂಬಿಕೆ ಇದೆ. ಅವರವರ ನಂಬಿಕೆ ಅವರವರಿಗೆ ಬಿಟ್ಟಿದ್ದು. ಹಿಂದೂ ಧರ್ಮದ ನಂಬಿಕೆಯನ್ನು ಮೌಡ್ಯ ಎನ್ನಲಾಗುತ್ತಿದೆ ಎಂದರು.

Related posts

Leave a Reply