Header Ads
Header Ads
Breaking News

ಗೌರಿ ಲಂಕೇಶ್ ಹತ್ಯೆ ಪ್ರಕರಣ. ಉಡುಪಿ ಪಡುಬಿದ್ರಿಯ ಇಬ್ಬರು ವಶಕ್ಕೆ. ಸಂದೇಶ್-ಯುವರಾಜ್ ಬಂಧಿತರು. ಹತ್ಯೆಯಲ್ಲಿ ಇವರ ಪಾತ್ರ ಅಸ್ಪಷ್ಟ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಕರಾವಳಿಗೂ ಬಲವಾದ ನಂಟಿದ್ಯಾ? ಗೊತ್ತಿಲ್ಲ. ಈ ಸಂಶಯ ಬರ್ತಿರೋದು ಯಾಕಂದ್ರೆ ಉಡುಪಿ ಜಿಲ್ಲೆಯ ಪಡುಬಿದ್ರಿಯಿಂದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆಗೂ ಇವರಿಗೂ ಏನು ಸಂಬಂಧ ಅನ್ನೋದು ಸ್ಪಷ್ಟವಾಗಿಲ್ಲ, ವಶಕ್ಕೆ ಪಡೆದ ಹಿಂದೂ ಕಾರ್ಯಕರ್ತರ ಕುಟುಂಬಿಕರು ಮಾತ್ರ ಈ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿದ್ದಾರೆ.ಗೌರಿ ಲಂಕೇಶ್ ಹತ್ಯೆಯಾಗಿ ಹನ್ನೊಂದು ತಿಂಗಳು ಕಳೆಯಿತು. ಈಗಾಗಲೇ ಹಲವಾರು ಅಪರಾಧಿಗಳು ಅಂದರ್ ಆಗಿದ್ದಾರೆ. ಪ್ರಮುಖ ಆರೋಪಿಗಳ ವಿಚಾರಣೆಯಿಂದ ಈ ಪ್ರಕರಣದ ಹೊಸಹೊಸ ಆಯಾಮಗಳು ತೆರೆದುಕೊಳ್ತಿವೆ. ಇವರ ಬಂಧನದಿಂದ ಇನ್ನೂ ಅನೇಕ ವಿಚಾರವಾದಿಗಳ ಹತ್ಯೆಯ ಸಂಚು ಕೂಡಾ ಬಯಲಾಗಿದೆ. ತನಿಖೆಯ ಆಧಾರದಲ್ಲಿ ಹಲವರನ್ನು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಇತ್ತೀಷೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯಿಂದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಕರಾವಳಿ ಜಿಲ್ಲೆ ಉಡುಪಿಯ ಪಡುಬಿದ್ರೆಯಿಂದ ಇಬ್ಬರು ಯುವಕರನ್ನು ಎಸ್‌ಐಟಿ ಪೊಲೀಸರು ವಿಚಾರಣೆಗೆ ಕರೆದೊಯ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ನಸುಕಿನ ವೇಳೆ ಪಡುಬಿದ್ರೆಗೆ ಬಂದ ಪೊಲೀಸರು, ಸ್ಥಳೀಯ ಪೊಲೀಸರ ಸಹಕಾರದಿಂದ ಯುವರಾಜ್ ಹಾಗೂ ಸಂದೇಶ ಎಂಬ ಇಬ್ಬರು ಯುವಕರನ್ನು ಕರೆದೊಯ್ದಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿರುವ ಇವರ ಬಂಧನ, ಸಂಘಟನೆಯ ಪ್ರಮುಖರನ್ನು ಅಚ್ಚರಿಯಲ್ಲಿ ತಳ್ಳಿದೆ.ಹಿಂದೂ ಜಾಗರಣ ವೇದಿಕೆಯಲ್ಲಿ ನಿಧಿ ಪ್ರಮುಖ ಆಗಿದ್ದ ಯುವರಾಜ್, ವೃತ್ತಿಯಲ್ಲಿ ಸಣ್ಣ ಗುತ್ತಿಗೆದಾರ. ಈತ ಈವರೆಗೆ ಯಾವುದೇ ಅಪರಾಧಿ ಕೃತ್ಯದಲ್ಲಿ ಭಾಗಿಯಾದವನಲ್ಲ.ಯುವರಾಜ್ ಬಂಧನ ಕುಟುಂಬವನ್ನು ಆಘಾತದಲ್ಲಿ ತಳ್ಳಿದೆ. ವೃದ್ಧ ತಂದೆ, ತಾಯಿ ಕಣ್ಣೀರಿನಲ್ಲಿ ಮೀಯುತ್ತಿದ್ದಾರೆ. ನಮ್ಮ ಮಗ ನಿರಪರಾಧಿ, ವಿಚಾರಣೆಗೆ ಬಂದ ಪೊಲಿಸರು, ನಮ್ಮ ಮಗನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಕೂಡಲೇ ಮಗನನ್ನು ಮನೆಗೆ ವಾಪಾಸು ಕಳುಹಿಸಿ ಎಂದು ಕಣ್ಣೀರಿಡುತ್ತಿದ್ದಾರೆ.ಇನ್ನೋರ್ವ ಆರೋಪಿ ಸಂದೇಶ ಜಾಗರಣ ವೇದಿಕೆಯ ತಾಲೂಕು ಸಹ ಸಂಯೋಜಕನಾಗಿದ್ದು, ಹಾಲಿನ ಡೈರಿ ನಡೆಸುತ್ತಿದ್ದವನು. ಆತನನ್ನು ಡೈರಿಯಿಂದಲೇ ಎಸ್ ಐ ಟಿ ತಂಡ ಕರೆದೊಯ್ದಿದ್ದು, ವಶಕ್ಕೆ ಪಡೆದ ಮನೆಯವರಿಗೆ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಗೌರಿ ಲಂಕೇಶ್ ಹತ್ಯೆಯಲ್ಲಿ ಇವರ ಪಾತ್ರ ಏನು? ಆರೋಪಿಗಳಿಗೆ ಆಶ್ರಯ ಕೊಟ್ಟವರೇ ಅಥವಾ ಈ ಸಂಚಿನಲ್ಲಿ ಭಾಗಿಯಾಗಿದ್ದರೇ ಎನ್ನುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಅನಿರೀಕ್ಷಿತ ಕಾರ್ಯಾಚರಣೆ ಮನೆಯವರನ್ನು ಮಾತ್ರ ಆತಂಕದಲ್ಲಿ ತಳ್ಳಿದೆ.

Related posts

Leave a Reply