Header Ads
Breaking News

ಗ್ರಾಮಚಾವಡಿಯಲ್ಲಿ ಅಕ್ರಮ ವೈನ್‌ಶಾಪ್ ವಿರುದ್ಧ ಬೃಹತ್ ಪ್ರತಿಭಟನೆ : ಗ್ರಾಮಸ್ಥರ ಸಮ್ಮುಖದಲ್ಲಿ ವೈನ್‌ಶಾಪ್‌ಗೆ ಬೀಗ

ಜನವಸತಿ ಪ್ರದೇಶ ಗ್ರಾಮಚಾವಡಿಯಲ್ಲಿ ಏಕಾಏಕಿ ಎದ್ದು ನಿಂತಿರುವ ವೈನ್ ಶಾಪ್ ವಿರುದ್ಧ ಹರೇಕಳ ನಾಗರಿಕ ಸಮಿತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭ ಬಿಗು ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತಾದರೂ ಅದನ್ನು ಭೇದಿಸಿದ ಗ್ರಾ.ಪಂ. ಸದಸ್ಯರೋರು, ಇತರ ಸದಸ್ಯರು, ಸಂಘಟನೆಗಳ ಮುಖಂಡರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ವೈನ್‌ಶಾಪ್‌ಗೆ ಬೀಗ ಜಡಿದರು. 

ಎರಡು ದಿನಗಳ ಹಿಂದೆ ಗ್ರಾಮಚಾವಡಿಯಲ್ಲಿರುವ ವಸತಿ ಸಮುಚ್ಛಯದಲ್ಲಿ ಏಕಾಏಕಿ ವೈನ್‌ಶಾಪ್ ತೆರೆಯಲಾಗಿತ್ತು. ಇದಕ್ಕೆ ಗ್ರಾಮ ಪಂಚಾಯಿತಿ ಪರವಾನಿಗೆಯೂ ಪಡೆದಿರಲಿಲ್ಲ. ಅಲ್ಲದೆ ಪಂಚಾಯಿತಿ ಸದಸ್ಯರಿಗೂ ಮಾಹಿತಿ ಇರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದರು. ವಿಷಯ ಅರಿತ ಪಂಚಾಯಿತಿ ಆಡಳಿತಗಾರರು ವೈನ್‌ಶಾಪ್ ಹಾಗೂ ಕಟ್ಟಡ ಮಾಲಕರಲ್ಲಿ ಪ್ರಶ್ನಿಸಿದಾಗ ಪಂಚಾಯಿತಿ ಅನುಮತಿ ಅಗತ್ಯವಿಲ್ಲ ಎಂದು ಉಡಾಫೆಯಿಂದ ಉತ್ತರಿಸಿದ್ದರು ಎನ್ನಲಾಗಿದೆ.

ಈ ನಡುವೆ ಬದ್ರುದ್ದೀನ್, ಶಾಲಿಹ್, ಬಶೀದ್, ಮಜೀದ್ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವೃ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯಿತಿಯನ್ನು ಕಡೆಗಣಿಸಿದರೂ ವೈನ್‌ಶಾಪ್‌ಗೆ ಅನುಮತಿ ನೀಡಿದ್ದು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

Related posts

Leave a Reply

Your email address will not be published. Required fields are marked *