Header Ads
Breaking News

ಗ್ರಾಮಸ್ಥರಿಂದ ವೀರ ಯೋಧರಿಗೆ ಅಭಿನಂದನಾ ಸಮಾರಂಭ

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಮುರಗೇಶ ದಳವಾಯಿ ಯವರು 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಸ್ವಗ್ರಾಮಕ್ಕೆ ಮರಳುತ್ತಿರುವ ವೀರಯೋಧರವರಿಗೆ ಗ್ರಾಮಸ್ಥರು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡರು.
 ಮೊದಲಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರ ಯೋಧರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. ಇದೇ ವೇಳೆ ಮಾತನಾಡಿದ ಡಿವೈಎಸ್ಪಿ ಅರುಣ್ ಕುಮಾರ ಕೊಳೂರ ಸೈನಿಕರು ನಮ್ಮ ಸಹೋದರರು ನಮ್ಮೆಲ್ಲರ ಹೆಮ್ಮೆಯ ದೇಶದ ಗಡಿ ಕಾಯುವ ವೀರರು. ಅವರು ಗಡಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮರಳಿ ಬಂದಾಗ ಅವರಿಗೆ ಆಗಿರುವ ಖುಷಿಯನ್ನು ವ್ಯಕ್ತಪಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಬಸವರಾಜ ತಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜೊತೆಗೆ ಪಿಎಸ್‌ಐ ಚಂದ್ರಶೇಖರ ಹೇರಕಲ್. ಅದೇ ರೀತಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಲ್ಲಪ್ಪ ಮಟ್ಟಿ. ಮಂಜುನಾಥ್ ಬೋರಗಿ ಹಾಗೂ ದಿಂಡವಾರ ಗ್ರಾಮದ ಹಿರಿಯರು, ಯುವಕರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *