Header Ads
Header Ads
Header Ads
Breaking News

ಗ್ರಾಮೀಣ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಮಂಜೇಶ್ವರ ಪೈವಳಿಕೆಯಲ್ಲಿ ಡಿವೈ‌ಎಫ್‌ಐನಿಂದ ಪ್ರತಿಭಟನೆ

 

ಮಂಜೇಶ್ವರ ಪೈವಳಿಕೆ ಪಂಚಾಯತ್ ಐದನೇ ವಾರ್ಡು ಸದಸ್ಯೆ ಗ್ರಾಮೀಣ ಅಭಿವೃದ್ದಿ ಯೋಜನೆಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿರುವುದಾಗಿ ಅರೋಪಿಸಿ ಡಿವೈ‌ಎಫ್‌ಐ ಪೈವಳಿಕೆ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿ‌ಎಂ ಮಂಜೇಶ್ವರ ಏರಿಯಾ ಸದಸ್ಯೆ ಬೇಬಿ ಶೆಟ್ಟಿ ಭ್ರಷ್ಟಾಚಾರ ನಡೆಸಿದ ವಾರ್ಡ್ ಸದಸ್ಯೆ ಕೂಡಲೇ ರಾಜೀನಾಮೆ ನೀಡಬೇಕು, ಇಲ್ಲದೇ ಮುಂದಿನ ದಿನಗಳಲ್ಲಿ ಪಂಚಾಯತ್ ಮುಂಬಾಗದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವುದಾಗಿ ಎಚ್ಚರಿಕೆಯನ್ನು ನೀಡಿದರು. ಸಿಪಿ‌ಎಂ ಬಾಯಾರು ಲೋಕಲ್ ಕಾರ್ಯದರ್ಶಿ ಪುರಿಷೋತ್ತಮ ಬಳ್ಳೂರು, ಪ್ರಶಾಂತ್ ಕನಿಲ, ಅಸ್ಫರ್ ಬಾಯಾರು, ಬಶೀರ್ ಬಿ ಎ, ಪವಿತ್ರನ್, ಝಕರಿಯ್ಯ ಹಾಗೂ ಸಿದ್ದೀಖ್ ಆವಲ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Related posts

Leave a Reply