Header Ads
Header Ads
Header Ads
Breaking News

ಗ್ರಾಮೀಣ ಕೃಷಿ ಸಂತೆಗೆ ಚಾಲನೆ ಜಿಲ್ಲಾ ಮಟ್ಟದ ಉದ್ಘಾಟನೆ ಮಂಜೇಶ್ವರದಲ್ಲಿ

ಮಂಜೇಶ್ವರ: ಕೇರಳ ಕೃಷಿ ಇಲಾಖೆ ಗ್ರಾಮ ಪಂಚಾಯತ್, ಕುಟುಂಬಶ್ರೀ ಮಿಶನ್ ಹಾಗೂ ಹರಿತ ಮಿಶನ್ ಸಹಯೋಗದೊಂದಿಗೆ ನಡೆಸಲ್ಪಡುವ ಗ್ರಾಮೀಣ ಕೃಷಿ ವಾರ ಸಂತೆಯನ್ನು ಕೇರಳ ಸರಕರ 400 ಪಂಚಾಯತುಗಳಲ್ಲಿ ನಡೆಸಲು ತೀರ್ಮಾನಿಸಿದೆ.

ಗ್ರಾಮೀಣ ಕೃಷಿ ಉತ್ಪನ್ನಗಳನ್ನು ನ್ಯಾಯ ಬೆಲೆಯಲ್ಲಿ ಸ್ಥಳೀಯರಿಂದ ಸಂಗ್ರಹಿಸಿ ಕೃಷಿಕರಿಗೆ ತಲುಪಿಸುವ ಯೋಜನೆಗೆ ನೂತನ ಸರಕಾರ ಸಾಕ್ಷಿಯಾಗುತ್ತಿದೆ. ಈ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 20 ವಾರ ಸಂತೆಗಳಿಗೆ ಅನುಮತಿ ನೀಡಲಾಗಿದೆ.

ಇದರ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಮಂಜೇಶ್ವರ ಬ್ಲೋಕ್ ಪಂಚಾಯತು ಪರಿಸರದಲ್ಲಿ ನಡೆಯಿತು. ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಬ್ಲೋಕ್ ಪಂ. ಅಧ್ಯಕ್ಷ ಎ. ಕೆ. ಎಂ ಅಶ್ರಫ್ ಉದ್ಘಾಟಿಸಿದರು. ಕೃಷಿ ಇಲಾಖೆಯ ಕಾಸರಗೋಡು ಪ್ರಿನ್ಸಿಪಲ್ ಉಷಾ ದೇವಿ ಇದರ ಬಗ್ಗೆ ಮಾಹಿತಿಯನ್ನು ನೀಡಿದರು.

ಬ್ಲೋಕ್ ಪಂಚಾಯತು ಆರೋಗ್ಯ ಹಾಗೂ ವಿದ್ಯಾಭ್ಯಾಸ ಅಭಿವೃದ್ದಿ ಕ್ರಿಯಾ ಸಮಿತಿ ಅಧ್ಯಕ್ಷ ಮುಸ್ತಫ ಉದ್ಯಾವರ ಸೇರಿದಂತೆ ಅಧಿಕಾರಿಗಳು, ಕೃಷಿಕರು ಸೇರಿದಂತೆ ಹಲವರು ಉಪಸ್ಥರಿದ್ದರು. ತಾಜಾ ತರಕಾರಿ ಹಣ್ಣಿನ ಜೊತೆಯಾಗಿ ತಾಜಾ ಕೋಳಿ ಮೊಟ್ಟೆ ಕೂಡಾ ಸಂತೆಯಲ್ಲಿ ಕಂಡು ಬಂತು.

Related posts

Leave a Reply