Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಗ್ರಾಮೀಣ ಪ್ರದೇಶದಲ್ಲಿ ಯುವ ಚೈತನ್ಯ ಯೋಜನೆ ಉಡುಪಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ

ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಕ್ರೀಡಾ ಇಲಾಖೆ ಯುವ ಚೈತನ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್, ಲಯನ್ಸ್, ಲಯನೆಸ್ ಮತ್ತು ಪರ್ಕಳ ಲಿಯೋ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಚಿಣ್ಣರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ 25 ಮಂದಿಯನ್ನು ಒಳಗೊಂಡ ಯುವಕರ ತಂಡಗಳಿಗೆ ಕ್ರೀಡಾ ಇಲಾಖೆಯಿಂದ ಸುಮಾರು 40,000 ಮೊತ್ತದ ಕ್ರೀಡಾ ಪರಿಕರವಾದ ಬ್ಯಾಟ್, ಬಾಲ್, ರಿಂಗ್, ವಾಲಿಬಾಲ್, ತ್ರೋ ಬಾಲ್‌ಗಳನ್ನು ವಿತರಿಸಲಾಗುತ್ತದೆ. ತಿಂಗಳ ಅತ್ಯಂತದೊಳಗೆ ಜಿಲ್ಲೆಯ 300 ತಂಡಗಳಿಗೆ ಕ್ರಿಡಾ ಕಿಟ್ ವಿತರಿಸಲಾಗುತ್ತದೆ ಎಂದು ಹೇಳಿದರು.

ನಿಟ್ಟೆ ಕಾಲೇಜಿನ ರಾಷ್ಟ್ರಮಟ್ಟದ ವಾಲಿಬಾಲ್ ಕ್ರಿಡಾಪಟು ಪೃಥ್ವಿ ಅವರಿಗೆ ಕ್ರೀಡಾ ಇಲಾಖೆ ವತಿಯಿಂದ ಶುಲ್ಕ ಮರುಪಾವತಿ ಚೆಕ್ ವಿತರಿಸಿದರು. ಉಪಾಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಪರ್ಕಳ ಲಯನ್ಸ್ ಅಧ್ಯಕ್ಷ ಹರೀಶ್, ಜಯರಾಮ ಸುವರ್ಣ, ರಮೇಶ್, ಕಾರ್ಯದರ್ಶಿ ಸೀತಾನದಿ ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವರದಿ:ಪಲ್ಲವಿ ಸಂತೋಷ

Related posts

Leave a Reply