

ಕಾರ್ಕಳದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಪ್ರಾರಂಭವಾಗಿದ್ದು ಇಂದು ಹೆಚ್ಚಿನ ಗ್ರಾಮಪಂಚಾಯಿತಿಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬಂದಿರೋದು ಕಂಡುಬಂತು
ನಾಳೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು ಮಿಯಾರು ಗ್ರಾಮ ಪಂಚಾಯತಿಯಲ್ಲಿ 19ಸ್ಥಾನಗಳಿಗೆ ಇಂದಿನವರೆಗೆ 22 ಮಂದಿ ನಾಮಪತ್ರ ಸಲ್ಲಿಕೆಯಾಗಿದೆ. ನಾಳೆ ತನಕ 40 ಮಂದಿ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ಇದೇ ರೀತಿ ಕುಕ್ಕುಂದೂರು ಗ್ರಾಮ ಪಂಚಾಯತಿಯಲ್ಲಿ 32 ಸ್ಥಾನಗಳಿದ್ದು ಈಗಾಗಲೇ 32 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ. ನಾಮಪತ್ರ ಸಲ್ಲಿಸಲು ಕಡೆ ದಿನ ವಾಗಿರುವುದರಿಂದ ಸುಮಾರು 70 ನಾಮಪತ್ರ ಸಲ್ಲಿಕೆ ಆಗುವ ಸಾಧ್ಯತೆ ಇದೆ.