Header Ads
Breaking News

ಗ್ರಾಮ ಮಟ್ಟದ ಕಡತಗಳ ವಿಲೇವಾರಿ; ಕಂದಾಯ ಅದಾಲತ್ ಮೂಲಕ ದಾಖಲೆ ಪರಿಷ್ಕರಣೆ

ಪುತ್ತೂರು; ಗ್ರಾಮಮಟ್ಟದ ಕಂದಾಯ ಕಡತಗಳ ತಿದ್ದುಪಡಿ, ಕಂದಾಯ ಇಲಾಖೆಯ ದಾಖಲೆಗಳ ಪರಿಷ್ಕರಣೆ ನಡೆಸುವುದೇ ಹೋಬಳಿ ಮಟ್ಟದ ಕಂದಾಯ ಅದಾಲತ್ ನ ಉದ್ದೇಶವಾಗಿದೆ. ದಾಖಲೆಗಳಲ್ಲಿ ಕಣ್ತಪ್ಪಿನಿಂದ ಉಂಟಾದ ದೋಷಗಳನ್ನು ಸರಿಪಡಿಸುವುದು ಕಂದಾಯ ಇಲಾಖೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಇಲಾಖೆಯು ಪರಿಣಾಮಕಾರಿಯಾಗಿ ಕಂದಾಯ ಅದಾಲತ್ ಗಳನ್ನು ನಡೆಸುತ್ತಿದೆ. ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪುತ್ತೂರು ತಹಶೀಲ್ದಾರ್ ರಾಹುಲ್ ಶಿಂಧೆ ಹೇಳಿದರು.

ಅವರು ಪುತ್ತೂರು ಮಿನಿವಿಧಾನಸೌಧದಲ್ಲಿ ನಡೆದ ಪುತ್ತೂರು ಹೋಬಳಿ ಮಟ್ಟದ ಕಂದಾಯ ಅದಾಲತ್ ನಲ್ಲಿ ಮಾತನಾಡಿದರು. ಜನರು ಕಂದಾಯ ಅದಾಲತ್ ನಲ್ಲಿ ಪಾಲ್ಗೊಂಡು ತ್ವರಿತವಾಗಿ ದಾಖೆಲ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದರು.ಪುತ್ತೂರು ಕಂದಾಯ ಹೋಬಳಿ ಮಟ್ಟದ ವಿವಿಧ ಗ್ರಾಮಗಳ 22 ನಾಗರಿಕರು ಅದಾಲತ್ ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡರು. ತಹಶೀಲ್ದಾರರೇ ಸ್ವತಹ: ಉಸ್ತುವಾರಿ ವಹಿಸಿ ಇಲಾಖಾ ಸೇವಾ ಕಾರ್ಯಗಳನ್ನು ನೀಡಿದರು. ಈ ಸಂದರ್ಭ ಪುತ್ತೂರು ಉಪತಹಶೀಲ್ದಾರ್ ರಾಮ ನಾಯ್ಕ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *