Header Ads
Breaking News

ಗ್ರಾಹಕರಿಗೆ ಸರಿಯಾದ ಸಮಯಕ್ಕೆ ನೀಡದ ವಿದ್ಯುತ್ ಬಿಲ್ : ಮೆಸ್ಕಾಂ ಇಲಾಖೆ ಬೇಜವಾಬ್ದಾರಿ ಖಂಡಿಸಿ ಪ್ರತಿಭಟನೆ

ವಿಟ್ಲ: ಪ್ರಸ್ತುತ ಮೆಸ್ಕಾಂ ಇಲಾಖೆ ವಿದ್ಯುತ್ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ನೀಡದೆ ವಿದ್ಯುತ್ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಮೆಸ್ಕಾಂ ಇಲಾಖೆ ಮತ್ತು ಸರ್ಕಾರದ ಬೇಜಾಬ್ದಾರಿಯನ್ನು ಖಂಡಿಸಿ ಬಂಟ್ವಾಳ ವಿದ್ಯುತ್ ಬಳಕೆದಾರರ ಸಾರ್ವಜನಿಕ ಹೋರಾಟ ಸಮಿತಿ ವತಿಯಿಂದ ಸೆಪ್ಟೆಂಬರ್ 7ರ ಸೋಮವಾರ ವಿಟ್ಲ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು. 

ಈಗಾಗಲೇ ಸಾರ್ವಜನಿಕರಿಗೆ ವಿದ್ಯುತ್ ಬಿಲ್ ತಡವಾಗಿ ನೀಡಲಾಗುತ್ತಿದೆ. ಒಂದು ಕಡೆ ಕೋವಿಡ್ ಸಂಕಷ್ಟ, ಇನ್ನೊಂದೆಡೆ ವಿಳಂಭವಾಗಿ ವಿದ್ಯುತ್ ಬಿಲ್ ನೀಡುವುದರಿಂದ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಹಳೆಯ ಮೀಟರ್ ರೀಡರ್ಸ್‍ಗಳ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಅವರನ್ನು ಅವರನ್ನೇ ನೇಮಕ ಮಾಡಿ ವಿದ್ಯುತ್ ಬಳಕೆದಾರರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಸರ್ಕಾರ ಮತ್ತು ಮೆಸ್ಕಾಂ ಇಲಾಖೆ ಮೇಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ರಮಾನಾಥ ವಿಟ್ಲ, ಪ್ರಧಾನ ಕಾರ್ಯದರ್ಶಿ ನೌಫಲ್ ಕುಡ್ತಮುಗೇರು, ಜತೆ ಕಾರ್ಯದರ್ಶಿ ಬಿ.ಕೆ ಪ್ರಸಾದ್ ಅನಂತಾಡಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *