Header Ads
Header Ads
Header Ads
Breaking News

ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಕೋಳಿ ಅಂಗಡಿ ಮಾಲಕರಿಗೆ ಮೆಣಸಿನ ಹುಡಿ ಎರಚಿ ದರೋಡೆ ಸಾಲಿಗ್ರಾಮದಲ್ಲಿ ನಡೆದ ಘಟನೆ

 

ಗ್ರಾಹಕರ ವೇಷದಲ್ಲಿ ಬಂದ ದರೋಡೆಕೋರರು ಕೋಳಿ ಮಾರಾಟ ಅಂಗಡಿಯ ಮಾಲಿಕರಿಗೆ ಮೆಣಸಿನ ಪುಡಿ ಎರಚಿ ಬಳಿಕ ಕಟ್ಟಿ ಹಾಕಿ ಅವರಲ್ಲಿದ್ದ ಸುಮಾರು ೫೦,೦೦೦ ನಗದನ್ನು ದೋಚಿ ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದರಿ ೬೬ ಸಾಲಿಗ್ರಾಮದಲ್ಲಿ ನಡೆದಿದೆ.

ಭಾನುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಇರುವ ಗ್ರೇಶಬ್ ಲೋಬೊ ಮಾಲಕತ್ವದ ಲೋಬೋ ಚಿಕನ್ ಸೆಂಟರಿಗೆ ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಗ್ರೇಶನ್ ಲೋಬೊ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಬಳಿಕ ಕೈಗಳನ್ನು ಬಳ್ಳಿಯಿಂದ ಕಟ್ಟಿಹಾಕಿ ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಹರೀಶ್ ಕಿರಣ್ ತುಂಗಾ ಕುಂದಾಪುರ

Related posts

Leave a Reply