Header Ads
Header Ads
Header Ads
Breaking News

ಗ್ರಾ.ಪಂ.ನ ನೂತನ ಕಟ್ಟಡ ಉದ್ಘಾಟನೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ94 ಸಿ ಹಕ್ಕುಪತ್ರ, ವಿವಿಧ ಸವಲತ್ತುಗಳ ವಿತರಣೆ ವಿಟ್ಲ ಬೋಳಂತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಕ್ರಮ

ವಿಟ್ಲದ ಬೋಳಂತೂರು ಗ್ರಾಮ ಪಂಚಾಯತ್ ವೀರಕಂಭ ಗ್ರಾಮದಿಂದ ಪ್ರತ್ಯೇಕಿಸಲ್ಪಟ್ಟು ನೂತನ ಗ್ರಾ.ಪಂ. ಆಗಿ ನೂತನವಾಗಿ ನಿರ್ಮಿಸಿದ ಕಟ್ಟಡ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು 94 ಸಿ ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ಬೋಳಂತೂರು ಗ್ರಾಮದಲ್ಲಿ ಬಂಟ್ವಾಳ ವಲಯ ಅರಣ್ಯ ಇಲಾಖೆ ವತಿಯಿಂದ ಪ.ಜಾತಿ/ಪ.ಪಂ.ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ವಿತರಿಸಲಾಯಿತು. 89 ಮಂದಿಗೆ 94 ಸಿ ಹಕ್ಕುಪತ್ರ, ಒಬ್ಬರಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ, 11 ಮಂದಿಗೆ ವಿವಿಧ ಪಿಂಚಣಿಗಳನ್ನು ವಿತರಿಸಲಾಯಿತು.

5.27 ಕೋಟಿ ರೂ ವೆಚ್ಚದ ಬೋಳಂತೂರು-ತಾಳಿತ್ತನೂಜಿ-ನಾಡಾಜೆ-ಮದಕ-ಕೊಳ್ನಾಡು ರಸ್ತೆ ಕಾಮಗಾರಿ, 40 ಲಕ್ಷ ರೂ ವೆಚ್ಚದ ನಾರಂಕೋಡಿ ರಸ್ತೆ ಕಾಂಕ್ರೀಟ್ ಕಾಮಗಾರಿ, 10 ಲಕ್ಷ ರೂ ವೆಚ್ಚದ ಕೊಕ್ಕಪುಣಿ-ಬಚ್ಚಿರಕೋಡಿ ರಸ್ತೆ ಕಾಂಕ್ರೀಟ್ ಕಾಮಗಾರಿ, 4 ಲಕ್ಷ ರೂ ವೆಚ್ಚದ ಗುಂಡಿಮಜಲು ಭಜನ ಮಂದಿರ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನಡೆಸಲಾಯಿತು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಗ್ರಾಮಕರಣಿಕ ಕರಿಬಸಪ್ಪ ಅವರನ್ನು ಸಚಿವರು ಸನ್ಮಾನಿಸಿದರು.
ಬೆಂಗಳೂರು ಮಲ್ಲೇಶ್ವರಂನ ರಮಾನಾಥ ರೈ ಅಭಿಮಾನಿ ಬಳಗವು ತಾ.ಪಂ.ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್‌ಆಲಿ, ಬೋಳಂತೂರು ಗ್ರಾ.ಪಂ.ಅಧ್ಯಕ್ಷೆ ಆಸ್ಯಮ್ಮ, ಉಪಾಧ್ಯಕ್ಷ ಚಂದ್ರಶೇಖರ ರೈ ಬೋಳಂತೂರು, ಸದಸ್ಯ ಯಾಕುಬ್ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಮಾತನಾಡಿದ ಸಚಿವರು ಹಿಂದೆ ಬಂಡವಾಳಶಾಹಿಗಳಿಗೆ, ಜಮೀನ್ದಾರರಿಗೆ ಮಾತ್ರ ಬ್ಯಾಂಕ್ ಸೌಲಭ್ಯವಿತ್ತು. ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣಗೊಳಿಸಿದ ಬಳಿಕ ಬಡವರಿಗೂ ಬ್ಯಾಂಕಿನ ಸೌಲಭ್ಯ ಒದಗಿತು. ಮಾತೃಪೂರ್ಣ, ಮನಸ್ವಿನಿ, ಮೈತ್ರಿ ಯೋಜನೆ ಮತ್ತು ಇತರ ಮಾಸಾಶನಗಳು ಬಡವರ ಕಲ್ಯಾಣಕ್ಕಾಗಿ ದೊರೆತಿವೆ. ಇಂದು ಕರ್ನಾಟಕ ಸರಕಾರ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿದ್ದು ಬಡವರನ್ನು ಋಣಮುಕ್ತಗೊಳಿಸಿದೆ. ಅಲ್ಪಸಂಖ್ಯಾಕ ಸಾಲ, ಅಂಬೇಡ್ಕರ್ ಮನೆ ಸಾಲ, ಆಶ್ರಯ ಮನೆ ಸಾಲ, ವಿದ್ಯುತ್ ಶುಲ್ಕಗಳನ್ನು ಮನ್ನಾ ಮಾಡಿದೆ ಎಂದರು.

ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ಶೋಭಾ ರೈ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬೋಳಂತೂರು ಗ್ರಾ.ಪಂ. ಗ್ರಾ.ಪಂ.ಅಧ್ಯಕ್ಷೆ ಆಸ್ಯಮ್ಮ, ಉಪಾಧ್ಯಕ್ಷ ಚಂದ್ರಶೇಖರ ರೈ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಇಂಜಿನಿಯರ್ ಜಯಾನಂದ, ಆರ್‌ಎಫ್‌ಒ ಸುರೇಶ್, ಎಸ್‌ಡಿ‌ಎಂಸಿ ಅಧ್ಯಕ್ಷ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ

Related posts

Leave a Reply