Header Ads
Breaking News

ಗ್ರಾ.ಪಂ. ವ್ಯವಸ್ಥೆಯನ್ನು ನಿಷ್ಕ್ರೀಯಗೊಳಿಸುತ್ತಿರುವ ಸರ್ಕಾರದ ಕ್ರಮಕ್ಕೆ ಖಂಡನೆ : ಸುಭಾಶ್ವಂದ್ರ ಶೆಟ್ಟಿ ಕುಳಾಲು ಹೇಳಿಕೆ

ವಿಟ್ಲ: ಕರ್ನಾಟಕ ಪಂಚಾಯತ್‍ರಾಜ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಹಂತಹಂತವಾಗಿ ನಿಷ್ಕ್ರಿಯಗೊಳಿಸುತ್ತಿರುವ ಸರಕಾರದ ಕ್ರಮವನ್ನು ದ.ಕ.ಜಿಲ್ಲೆ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಜಿಲ್ಲಾಧ್ಯ ಸುಭಾಶ್ವಂದ್ರ ಶೆಟ್ಟಿ ಕುಳಾಲು ಹೇಳಿದರು.ಅವರು ವಿಟ್ಲ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯವಾಗಿ ಗ್ರಾಮ ಸಭೆಗೆ ಮಹತ್ವ ನೀಡಿ ವಸತಿ ಯೋಜನೆ ಆಯ್ಕೆ ಹಾಗೂ ಅನುಷ್ಠಾನ ಅಧಿಕಾರ ಪಂಚಾಯಿತಿಗಳಿಗೆ ಇದ್ದು ಇದನ್ನು ಶಾಸಕರಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಒಂದೆರಡು ಪಂಚಾಯಿತಿಗಳಲ್ಲಿ ನಡೆದಿರುವ ಅವ್ಯವಹಾರದ ತನಿಖೆಯ ನೆಪ ನೀಡಿ ವಸತಿ ಫಲಾನುಭವಿಗಳ ಆಯ್ಕೆ ಮತ್ತು ಪಾವತಿಯನ್ನು ತಡೆಹಿಡಿಯಲಾಗಿದೆ. ಬಡ ನಿರಾಶ್ರಿತರ ಮೇಲೆ ಗದಾ ಪ್ರಹಾರ ಮಾಡಲಾಗಿದೆ. ಈ ಹಿಂದೆ ದಿ| ವೈ.ಆರ್.ಘೋರ್ಪಡೆಯವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾಗ ಶಾಸಕರ ಬೇಡಿಕೆಯನ್ನು ತಿರಸ್ಕರಿಸಿ ಪಂಚಾಯತ್‍ಗೆ ಪರಮಾಧಿಕಾರ ನೀಡಿದ್ದು ಈಗಲೂ ಶಾಸಕರ ಒತ್ತಡಕ್ಕೆ ಸರಕಾರ ಮಣಿಯಬಾರದು.ಮತ್ತು ಅತೀ ಶೀಘ್ರವಾಗಿ ಬಡ ಫಲಾನುವಿಗಳಿಗೆ ಕಂತು ಬಿಡುಗಡೆ ಮಾಡಬೇಕು ಮತ್ತು 2019-2020ನೇ ಸಾಲಿಗೆ ಆಯ್ಕೆಯಾದ ತಲಾ 20 ಫಲಾನುಭವಿಗಳು ಪಟ್ಟಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಬಂಟ್ವಾಳ ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *