Header Ads
Header Ads
Header Ads
Breaking News

ಗ್ರೀನ್ ವಾಕಥಾನ್ ಪರಿಸರದ ಬಗ್ಗೆ ಜಾಗೃತಿ

ಪರಿಸರದ ಬಗ್ಗೆ ಹೆಚ್ಚಿನ ಒತ್ತು ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಬ್ಯಾರೀಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ’ಗ್ರೀನ್ ವಾಕಥಾನ್’ ಕಾರ್ಯಕ್ರಮಕ್ಕೆ ನೆಹರೂ ಮೈದಾನದಲ್ಲಿ ಚಾಲನೆ ದೊರಕಿತು.


ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಟ್ರಸ್ಟಿ ಮಝರ್ ಎಸ್. ಬ್ಯಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಕಾರ್ಯಕ್ರಾಮದಲ್ಲಿ ಭಾಗವಹಿಸಿ ಮಾತನಾಡಿ ಗ್ರೀನ್ ವಾಕ್‌ಥಾನ್ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಬ್ಯಾರಿಸ್ ಇನ್ಸ್‌ಸ್ಟಿಟ್ಯೂಷನ್‌ನಿಂದ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದ ಅವರು ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮುಂದಿನ ದಿನಗಳಲ್ಲೂ ಆಗಬೇಕು ಎಂದರು. ಬಿಐಟಿ ಪ್ರಾಂಶುಪಾಲ ಡಾ. ಆಯಂಟನಿ ಎ.ಜೆ., ಪ್ರೊ. ಮುಸ್ತಫಾ ಬಸ್ತಿಕೋಡಿ, ಪ್ರೊ. ಭವಿಷ್ ಮೆಹ್ತಾ, ಡಾ. ಅಝೀಝ್ ಮುಷ್ತಾಕ್ ಹಾಗೂ ಬಿಐಟಿಯ ವಿವಿಧ ಘಟಕಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply