
ಸುರತ್ಕಲ್ ಮಾರುಕಟ್ಟೆ ಕಾಮಗಾರಿ ವಿಳಂಬ, ಈ ಖಾತಾ ಸಮಸ್ಯೆ, ಪ್ರಾಪರ್ಟಿ ಟ್ಯಾಕ್ಸ್, ಟ್ರೇಡ್ ಲೈಸೆನ್ಸ್, ಆನ್ಲೈನ್ ಸಿಸ್ಟಮ್, ಘನತ್ಯಾಜ್ಯ ಸೆಸ್ ಹಾಗೂ ಕುಡಿಯುವ ನೀರಿನ ಬಿಲ್ಗಳ ಹೆಚ್ಚಳ ವಿರೋಧಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದ ಕಾಂಗ್ರೆಸ್ ನಾಯಕ ಪುರುಷೋತ್ತಮ ಚಿತ್ರಾಪುರ ಮಾತನಾಡಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಟ್ಯಾಕ್ಸ್ ಸಂಗ್ರಹವಾಗುತ್ತಿದೆ. ಆದರೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.’
ಆನಂತರ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಮಾತನಾಡಿ, ಸರ್ಕಾರಿ ಸ್ವಾಮ್ಯದ ವಿಮಾನ ನಿಲ್ದಾಣವನ್ನು ಅದಾನಿ ವಿಮಾನ ನಿಲ್ದಾಣ ಎಂದು ಹಾಕಿ ಸ್ಥಳೀಯ ಜಮೀನನ್ನು ನೀಡಿದವರಿಗೆ ಇಂದು ಕೆಲಸವಿಲ್ಲದಂತಾಗಿದೆ, ರೈತ ವಿರೋಧ ಕಾನೂನನ್ನು ಜಾರಿಗೆ ತಂದು ರೈತರು ಜೀವಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ ಕುಳಾಯಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ವೈ.ರಾಘವೇಂದ್ರ ರಾವ್, ಹಿಂದುಳಿದ ವರ್ಗಗಳ ಮುಖಂಡ ಆನಂದ ಅಮೀನ್, ಅನಿಲ್ ಕುಮಾರ್, ಕೆ.ಮೊಹಮ್ಮದ್, ಬಶೀರ್ ಬೈಕಂಪಾಡಿ, ಪ್ರತಿಭಾ ಕುಳಾಯಿ, ಮೆಲ್ವಿನ್, ಶ್ಯಾಮರಾಯ ಸುವರ್ಣ, ಶಶಿಕಲಾಪದ್ಮನಾಭ್, ಗೋವರ್ಧನ ಶೆಟ್ಟಿಗಾರ, ಸಂಶಾದ್, ಚಂದ್ರಿಕಾ, ಭವ್ಯ, ಹೇಮಂತ್, ಜಲೀಲ್ ಕೃಷ್ಣಾಪುರ, ಹಿದಾಯತ್ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.