Header Ads
Breaking News

ಘರ್ಷಣೆಗೆ ಕಾರಣವಾದ ಸಂಸದ ಉಣ್ಣಿತ್ತಾನ್ ವಿಜಯೋತ್ಸವ ರ್‍ಯಾಲಿ

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ವಿಜಯಿಯಾದ ರಾಜ್‌ಮೋಹನ್ ಉಣ್ಣಿತಾನ್‌ರವರ ವಿಜಯೋತ್ಸವ ಮೆರವಣಿಗೆಯು ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂದರ್ಭ ಉಂಟಾದ ಘರ್ಷಣೆಯಿಂದ ಕರ್ನಾಟಕ ಕೇರಳ ಗಡಿ ಪ್ರದೇಶವಾದ ತೂಮಿನಾಡು ತಲಪಾಡಿ ಪರಿಸರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಕಳೆದ 30 ವರ್ಷಗಳ ಬಳಿಕ ಕಾಸರಗೋಡು ಲೋಕಸಭಾ ಕ್ಷೇತ್ರವನ್ನು ಯುಡಿಎಫ್ ತನ್ನ ತೆಕ್ಕೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ತಲಪಾಡಿಯಿಂದ ಕುಂಬಳೆತನಕ ವಿಜಯೋತ್ಸವ ರ್‍ಯಾಲಿ ನಡೆಸಲು ತೀರ್ಮಾನಿಸಲಾಗಿತ್ತು. ತೂಮಿನಾಡಿನಿಂದ ರಾಲಿಯನ್ನು ನಡೆಸುವಂತೆ ಮುಖಂಡರು ಒಲವನ್ನು ವ್ಯಕ್ತಪಡಿಸಿದಾಗ ಇದಕ್ಕೆ ಕಾರ್ಯಕರ್ತರು ಸಮ್ಮತಿಸದೇ ತಲಪಾಡಿಯಿಂದಲೇ ಆರಂಭಿಸುವಂತೆ ಪಟ್ಟು ಹಿಡಿದರು. ಕೊನೆಗೆ ನೂತನ ಸಂಸದ ಉಣ್ಣಿತ್ತಾನ್ ಅವರು ಸ್ಥಳಕ್ಕಾಗಮಿಸಿ ಕಾರ್ಯಕರ್ತರ ಇಚ್ಛೆಯಂತೆ ತಲಪಾಡಿಯಿಂದ ವಾಹನ ರಾಲಿಯನ್ನು ಆರಂಭಿಸುವುದಾಗಿ ಹೇಳಿದಾಗ ಕರ್ನಾಟಕ ತಲಪಾಡಿಯಿಂದ ಆರಂಭಿಸಬೇಕೆಂಬುದು ಕೆಲವರ ಆಗ್ರಹವಾಗಿತ್ತು. ಆದರೆ ಅದಕ್ಕೆ ಉಣ್ಣಿತ್ತಾನ್ ಸಮ್ಮತಿಸದೆ ಕೇರಳ ತಲಪಾಡಿಯಿಂದಲೇ ರಾಲಿಯನ್ನು ಆರಂಭಿಸಿದರು. ಈ ಮಧ್ಯೆ ಕೆಲವೊಂದು ಕಾರ್ಯಕರ್ತರು ಕರ್ನಾಟಕ ತಲಪಾಡಿಗೆ ತೆರಳಿದಾಗ ಅಲ್ಲಿಂದ ಕಲ್ಲು ತೂರಾಟವಾಗಿದೆ. ಮಾತ್ರವಲ್ಲ ಕರ್ನಾಟಕ ಪೊಲೀಸರು ಕೂಡಾ ಅದಕ್ಕೆ ಸಮ್ಮತಿ ನೀಡದೆ ಮಾತಿನ ಚಕಮಕಿ ನಡೆದಿದೆ. ಲಾಠಿ ಪ್ರಹಾರ ಕೂಡಾ ನಡೆದಿದೆ. ಉಣ್ಣಿತ್ತಾನ್ ಅವರ ವಾಹನ ರ್‍ಯಾಲಿ ಮಂಜೇಶ್ವರಕ್ಕೆ ತಲುಪುವಷ್ಟರಲ್ಲಿ ತಲಪಾಡಿಯಲ್ಲಿ ಘರ್ಷಣೆ ಶುರುವಾಗಿದೆ. ಬೈಕ್, ಆಟೋರಿಕ್ಷಾ, ಬಸ್‌ಗಳಿಗೆ ಹಾನಿಯಾಗಿದೆ.

Related posts

Leave a Reply

Your email address will not be published. Required fields are marked *