Header Ads
Header Ads
Breaking News

ಚಂದಳಿಕೆ ಸರ್ಕಾರಿ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರೋ ಮಾದರಿಯ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ

ವಿಟ್ಲ: ಚಂದಳಿಕೆ ಯುವಕೇಸರಿ ಅಬೀರಿ ಅತಿಕಾರಬೈಲು ಆಶ್ರಯದಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ೫ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ಪ್ರೋ ಮಾದರಿಯ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ ಭಾನುವಾರ ಚಂದಳಿಕೆ ಸರ್ಕಾರಿ ಶಾಲೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಯುವಕರಲ್ಲಿ ಇಚ್ಛಾಶಕ್ತಿ ಇದ್ದಾಗ ದೇಶದ ಅಭಿವೃದ್ಧಿ ಸಾಧ್ಯ. ಗಾಂಧೀಜಿಯ ಕನಸು ನನಸಾಗಬಹುದು. ಯುವ ಕೇಸರಿಯ ಸೇವಾ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಿದೆ. ಕಬಡ್ಡಿ ಆಟದ ಮೂಲಕ ದೇಶದ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತಿದ್ದಾರೆ ಎಂದರು.

ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಕುಂಡಡ್ಕ ನೂಜಿ ಮನೆತನದ ಗುರಿಕ್ಕಾರ ಕೆ.ಟಿ ವೆಂಕಟೇಶ್ವರ ನೂಜಿ ಅವರು ಇಲ್ಲಿಯ ಯುವಕರು ತಮ್ಮ ಸಂಪಾದನೆಯ ಹಣದಿಂದ ಬಡವರ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಬಡವರ ಸೇವೆ ಶ್ರೇಷ್ಠ ಕಾರ್ಯವಾಗಿದೆ ಎಂದರು.

ಬೆಳಿಗ್ಗೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉದ್ಯಮಿ ರಾಧಾಕೃಷ್ಣ ನಾಯಕ್ ಅವರು ಟ್ರೋಫಿ ಅನಾವರಣಗೊಳಿಸಿದರು. ಬಳಿಕ ವಿಟ್ಲ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತರಲಾಯಿತು. ಸಭಾ ಕಾರ್ಯಕ್ರಮದಲ್ಲಿ ಚಂದಳಿಕೆ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಕುಳಾಲು ಹಾಗೂ ಹಿರಿಯ ದೈವಾರಾಧಕ ಯಾದವ ಮಡಿವಾಳ ಅಬೀರಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸುಭಾಶ್ಚಂದ್ರ ನಾಯಕ್ ಅವರು ದತ್ತಿ ನಿಧಿ ವಿತರಿಸಿದರು. ಯುವಕೇಸರಿ ಅಬೀರಿ ಅತಿಕಾರಬೈಲು ಅಧ್ಯಕ್ಷ ದಿವಾಕರ ಶೆಟ್ಟಿ ಅಬೀರಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಹಿಳೆಯರ ಹಾಗೂ ಮಕ್ಕಳ, ಪುರುಷರ ಕಬಡ್ಡಿ ಪಂದ್ಯಾಟ ನಡೆಯಿತು.

ಈ ಸಂದರ್ಭ ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಭಾರತ ಶಾಮಿಯಾನದ ಮಾಲಕ ಸಂಜೀವ ಪೂಜಾರಿ, ಗೌಡ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ಮೋಹನ ಗೌಡ ಕಾಯಾರ್‌ಮಾರ್, ಮನೋಜ್ ಕುಮಾರ್ ಡೆಪ್ಪಿನಿ, ಚಲನಚಿತ್ರ ನಟ ಸುರೇಶ್ ಮಾಮೇಶ್ವರ, ಧ್ವನಿ ಮತ್ತು ಬೆಳಕು ಒಕ್ಕೂಟದ ಜಿಲ್ಲಾಧ್ಯಕ್ಷ ರಾಜಶೇಖರ ಕುಡ್ತಮುಗೇರು, ಯೋಗೀಶ ಕೇಪುಳಗುಡ್ಡೆ, ಗಂಗಾಧರ ನಿಡ್ಯ, ಈಶ್ವರ ಬಂಗೇರ ಅಬೀರಿ, ದಯಾನಂದ ಶೆಟ್ಟಿ ಉಜಿರೆಮಾರ್, ಯುವಕೇಸರಿ ಅಬೀರಿ ಅತಿಕಾರಬೈಲು ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಕಾರ್ಯಾಧ್ಯಕ್ಷ ಸುಶಾಂತ್ ಸಾಲಿಯಾನ್ ಚಂದಳಿಕೆ, ವಿಠಲ ಅತಿಕಾರಬೈಲು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *