Header Ads
Header Ads
Breaking News

ಚನ್ನಪಟ್ಟಣ ದೇವಸ್ಥಾನದ ಬ್ರಹ್ಮರಥೋತ್ಸವ ಕಿಕ್ಕಿರಿದ ಜನಜಂಗುಳಿಯಲ್ಲಿ ಅದ್ದೂರಿ ಕಾರ್ಯಕ್ರಮ

ಭಟ್ಕಳ ತಾಲೂಕಿನ ಅತಿ ಪ್ರಸಿದ್ದ ಚನ್ನಪಟ್ಟಣ ದೇವಸ್ಥಾನದ ಬ್ರಹ್ಮರಥೋತ್ಸವವು ಭಾನುವಾರ ಸಂಜೆ ಕಿಕ್ಕಿರಿದ ಜನಜಂಗುಳಿಯ ನಡುವೆ ಅದ್ದೂರಿಯಾಗಿ ವಿಜೃಂಭಣೆಯಿಂದ ಜರುಗಿತು. ಭಟ್ಕಳದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ಮಹೋತ್ಸವ. ಅಂದರೆ ಬ್ರಹ್ಮ ರಥೋತ್ಸವವಾಗಿದೆ. ಎಲ್ಲಾ ಕಡೆಯಲ್ಲಿ ರಾಮನವಮಿಯ ಹಬ್ಬದ ವಿಶೇಷವಿದ್ದರೆ ಭಟ್ಕಳ ತಾಲೂಕಿನ ಜನತೆಗೆ ರಾಮನವಮಿಯ ಜೊತೆಗೆ ಊರಿನ ಜಾತ್ರೆಯ ಸಡಗರ ಮತ್ತೊಂದು ಕಡೆ. ಭಾನುವಾರ ಬೆಳಿಗ್ಗೆಯಿಂದಲೇ ಜಾತ್ರಾ ಉತ್ಸವದ ರಂಗು ಜೋರಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದಲು ಭಕ್ತಾದಿಗಳು ಆಗಮಿಸಿ ಉತ್ಸವಕ್ಕೆ ಮೆರುಗು ನೀಡಿದರು.

ಭಾನುವಾರ ಸಂಜೆ ಭಾರಿ ಭಕ್ತಜನಸ್ತೋಮದ ನಡುವೆ ರಥವನ್ನು ಎಳೆಯುವುದರ ಮೂಲಕ ನಿರೀಕ್ಷಿತ ಉತ್ಸವಕ್ಕೆ ತೆರೆಬಿದ್ದಂತಾಗಿದೆ. ದೇವಸ್ಥಾನದ ಸುತ್ತ ಕಿಕ್ಕಿರಿದು ಸೇರಿ ಜಾತ್ರೆಯಲ್ಲಿ ಭಾಗಿಯಾದ ಭಕ್ತರ ಜೈ ಶ್ರೀರಾಮ ಜೈ ಹನುಮಾನ್ ಜೈಕಾರದ ಕೂಗು ಜಾತ್ರೆಯ ವಾತಾವರಣ ಮತ್ತಷ್ಟು ಹೆಚ್ಚಾಗುವಲ್ಲಿ ಕಾರಣವಾಯಿತು ಜಾತ್ರಾ ಮಹೋತ್ಸವಕ್ಕೆ ಹುಲಿ ವೇಷ, ಚಂಡೆ ವಾದನ, ವಿವಿಧ ವೇಷಧಾರಿಗಳ ಮನರಂಜನೆಯಿಂದ ಜಾತ್ರೆಯು ಕೂಡಿತ್ತು. ಊರಿನ ಜಾತ್ರೆಯಲ್ಲಿ ಮಾತ್ರ ಎಲ್ಲಾ ಸಮಾಜ ಧರ್ಮದವರು ಸೇರಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುವುದಂತು ಸಂತೋಷ ಕೊಡುತ್ತದೆ. ಸಿಕ್ಕಾಪಟ್ಟೆ ಸೆಕೆಯ ನಡುವೆ ಭಟ್ಕಳ ಜಾತ್ರಾ ಮಹೋತ್ಸವವು ಸಂಪನ್ನವಾಯಿತು.ಈ ಸಂದರ್ಭದಲ್ಲಿ ಚೆನ್ನಪಟ್ಟಣ ಹನುಮಂತ ದೇವಸ್ಥಾನ ಆಡಳಿತ ಕಮಟಿಯ ಅಧ್ಯಕ್ಷರು, ಸದಸ್ಯರು, ಭಟ್ಕಳ ಸಹಾಯಕ ಆಯುಕ್ತರಾದ ಎಂ.ಎನ್.ಮಂಜುನಾಥ, ತಹಶೀಲ್ದಾರ್ ವಿ.ಎನ್.ಬಾಡಕರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಎಎಸ್ಪಿ, ಡಿವೈಎಸ್ಪಿ ಶಿವಕುಮಾರ್, ಸಿ.ಪಿ.ಐ. ಸುರೇಶ ನಾಯಕ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಹಾಗೂ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ.